Breaking NewsLatestರಾಷ್ಟ್ರೀಯವಿದೇಶಸುದ್ದಿ

ಮತ್ತೂಮ್ಮೆ ಉಕ್ರೇನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

ಕೀವ್‌: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಕೂಡಲೇ ಸ್ವದೇಶಕ್ಕೆ ಮರಳುವಂತೆ ಭಾರತೀಯ ರಾಯಭಾರ ಕಚೇರಿ ಹೊಸದಾಗಿ ಸೂಚನೆ ಹೊರಡಿಸಿದೆ.

ಈ ಮೊದಲು ಕೂಡ ಅ.19ರಂದು ಉಕ್ರೇನ್‌ ತೊರೆಯುವಂತೆ ಭಾರತೀಯರಿಗೆ ಅಲ್ಲಿನ ರಾಯಭಾರ ಕಚೇರಿ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಭಾರತೀಯರು ಉಕ್ರೇನ್‌ ತೊರೆದಿದ್ದಾರೆ. ಆದರೆ ಭಾರತೀಯ ವಿದ್ಯಾರ್ಥಿಗಳು ಮಾತ್ರ ತಾವು ಉಕ್ರೇನ್‌ನಲ್ಲೇ ಉಳಿಯುವುದಾಗಿ ಹೇಳಿದ್ದರು.

ರಷ್ಯಾದಿಂದ ಬಾಂಬ್‌ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಗೆ ಲಭ್ಯವಿರುವ ಸಾರಿಗೆಯನ್ನು ಬಳಿಸಿಕೊಂಡು ಕೂಡಲೇ ಉಕ್ರೇನ್‌ನಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button