Breaking NewsLatestಕ್ರೈಂರಾಷ್ಟ್ರೀಯವಿದೇಶಸುದ್ದಿ

ಕಿಡ್ನಾಪ್ ಯತ್ನ: ಯುವತಿಯನ್ನ ಗುಂಡಿಟ್ಟು ಕೊಂದ ಕಿರಾತಕರು!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು, ಇತ್ತೀಚಿನ ಘಟನೆಯಲ್ಲಿ 18 ವರ್ಷದ ಹಿಂದೂ ಯುವತಿಯನ್ನು ಅಪಹರಿಸಲು ನಡೆಸಿದ ಯತ್ನ ವಿಫಲಗೊಂಡಿದ್ದು, ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು,ಮಾಧ್ಯಮಗಳ ವರದಿಯ ಪ್ರಕಾರ ಪೂಜಾ ಒಡ್ ಹತ್ಯೆಗೀಡಾದ ಯುವತಿಯಾಗಿದ್ದಾರೆ.  

ತನ್ನನ್ನು ಅಪಹರಿಸಲು ಬಂದ ದಾಳಿಕೋರರಿಗೆ ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು,ನಡುರಸ್ತೆಯಲ್ಲಿ ಹತ್ಯೆ ಮಾಡಲಾಗಿದೆ. 

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಮಹಿಳೆಯರನ್ನು ಸಿಂಧ್ ಪ್ರಾಂತ್ಯದಲ್ಲಿ ಅಪಹರಿಸಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದ್ದು,ಒತ್ತಾಯಪೂರ್ವಕ ಅಂತರ್ಧರ್ಮೀಯ ವಿವಾಹವನ್ನೂ ನಡೆಸಲಾಗುತ್ತಿದೆ. 

Spread the love

Related Articles

Leave a Reply

Your email address will not be published. Required fields are marked *

Back to top button