ಜನಸಾಮಾನ್ಯರಿಗೆ ಡಬ್ಬಲ್ ಶಾಕ್: ಗ್ಯಾಸ್ ಸಿಲಿಂಡರ್ ಜೊತೆ ಪೆಟ್ರೋಲ್, ಡಿಸೇಲ್ ದುಬಾರಿ

ಜನ ಸಾಮಾನ್ಯರಿಗೆ ಜೇಬಿಗೆ ಸರ್ಕಾರ ಮತ್ತೆ ಮತ್ತೆ ಕತ್ತರಿ ಪ್ರಯೋಗಿಸುತ್ತಲೇ ಇದೆ. 2021ರ ಅಕ್ಟೋಬರ್ ನಲ್ಲಿ 15 ರೂಪಾಯಿ ಹೆಚ್ಚಳವಾಗಿದ್ದ ಸಿಲಿಂಡರ್ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ. ಇಂದಿನಿಂದಲೇ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆ 50 ರೂಪಾಯಿ ಏರಿಕೆ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟಿಯಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಭಾರತದ ಮೇಲೂ ಬಿದ್ದಿದೆ. ಕಳೆದ ಬಾರಿ ಅಕ್ಟೋಬರ್ 6 ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಸರ್ಕಾರಿ ತೈಲ ಕಂಪನಿಗಳು ಮಂಗಳವಾರ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, 50 ರೂಪಾಯಿ ಏರಿಕೆ ಮಾಡಿವೆ.
ಮಾರ್ಚ್ 22ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಲಕ್ನೋದಲ್ಲಿ ರೂ 938 ರಿಂದ ರೂ 987.5 ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ 949.5 ರೂಪಾಯಿಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 902.50 ಇದ್ದ ಸಿಲಿಂಡರ್ ಬೆಲೆ 952.50 ರೂಪಾಯಿಗೆ ಹೆಚ್ಚಳವಾಗಿದೆ.
ನಾಲ್ಕು ತಿಂಗಳ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 100.58 ಪೈಸೆ ಇದ್ದ ಪೆಟ್ರೋಲ್ ಇದೀಗ 101.38 ಆಗಿದೆ. ಹಾಗೂ 85.01 ಇದ್ದ ಡೀಸೆಲ್ ಸದ್ಯ 85.81 ರೂಪಾಯಿಗೆ ಏರಿಕೆಯಾಗಿದೆ.
