Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಸಂಭಾವನೆ ಇಳಿಸಿಕೊಂಡ ನಟಿ ಪೂಜಾ ಹೆಗ್ಡೆ

ಸೌತ್ ಸಿನಿ ರಂಗದಲ್ಲಿ ಸಾಕಷ್ಟು ಬೇಡಿಕೆ ಇಟ್ಟುಕೊಂಡಿರೋ ನಟಿಯರ ಸಾಲಿನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ ಹಾಗೂ ಕೃತಿ ಶೆಟ್ಟಿ ಇದ್ದಾರೆ. ಈ ಪೈಕಿ ನಂಬರ್ ಒನ್ ಸ್ಥಾನದಲ್ಲಿರೋದು ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ. ಆದರೆ ಸದ್ಯದ ಮಾಹಿತಿ ಪ್ರಕಾರ ಪೂಜಾ ಹೆಗ್ಡೆ ನಂಬರ್ ಒನ್ ಪಟ್ಟದಿಂದ ಕೆಳಗಿಳಿಯುತ್ತಿದ್ದು ಆ ಜಾಗಕ್ಕೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿಕೊಡ್ತಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಪೂಜಾ ಹೆಗ್ಡೆ ಹೊಸದೊಂದು ನಿರ್ಧಾರ ಕೈಗೊಂಡಿದ್ದು ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿರೋ ಪೂಜಾ ಹೆಗ್ಡೆ ಸಂಭಾವನೆಯಲ್ಲೂ ನಂಬರ್ ಒನ್. ಸೌತ್ ಸಿನಿ ರಂಗದಲ್ಲಿ ದುಬಾರಿ ಸಂಭಾವನೆ ಪಡೆಯುವ ನಟಿಯಾಗಿ ಪೂಜಾ ಹೆಗ್ಡೆ ಇದ್ದಾರೆ. ಆದರೆ ಪೂಜಾರ ದುಬಾರಿ ಸಂಭಾವನೆಯಿಂದಾಗಿ ಸಾಕಷ್ಟು ಆಫರ್​ಗಳು ಕೈ ತಪ್ಪಿ ಹೋಗಿವೆ ಎನ್ನಲಾಗ್ತಿದೆ. ಪೂಜಾಗೆ ಕೈ ತಪ್ಪಿದ ಆಫರ್​ಗಳು ರಶ್ಮಿಕಾ ಪಾಲಾಗುತ್ತಿದ್ದು ಇದೀಗ ಪೂಜಾ ಹೆಗ್ಡೆ ಎಚ್ಚೆತ್ತುಕೊಂಡಿದ್ದಾರೆ.

ಸಂಭಾವನೆ ವಿಷಯದಿಂದ ಆಫರ್​​ಗಳು ಕೈ ತಪ್ಪುತ್ತಿರುವ ವಿಚಾರ ತಿಳಿದ ಪೂಜಾ ಹೆಗ್ಡೆ ತಮ್ಮ ಸಂಭಾವನೆಯನ್ನ ಕೊಂಚ ಮಟ್ಟಿಗೆ ಕಮ್ಮಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಪೂಜಾರ ವಿರುದ್ಧ ಮೂಗು ಮುರಿಯುತ್ತಿದ್ದ ದೊಡ್ಡ ದೊಡ್ಡ ನಿರ್ಮಾಪಕರು ಇದೀಗ ಮತ್ತೆ ಪೂಜಾ ಹಿಂದೆ ಬಿದ್ದಿದ್ದಾರೆ.

ಸದ್ಯ ಪವನ್ ಕಲ್ಯಾಣ್ ನಟನೆಯ ಮುಂದಿನ ಸಿನಿಮಾ ‘ಭವದೀಯುಡು ಭಗತ್ ಸಿಂಗ’ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಪೂಜಾ ಸಿನಿಮಾವೊಂದಕ್ಕೆ ಮೂರು ಕೋಟಿ ಸಂಭಾವನೆಯ ಪಡೆಯುತ್ತಿದ್ದರು. ಮೂರು ಕೋಟಿ ಇಲ್ಲದೇ ಸಿನಿಮಾ ಒಪ್ಪುವುದಿಲ್ಲವಂತೆ. ಇದೇ ಕಾರಣಕ್ಕೆ ಸಾಕಷ್ಟು ಆಫರ್​ಗಳು ಕೈ ತಪ್ಪಿದ್ದವಂತೆ.

ಪೂಜಾ ಸಂಭಾವನೆ ಕಡಿಮೆ ಮಾಡಿಕೊಳ್ತಿದ್ದಂಗೆ ಸಾಕಷ್ಟು ನಿರ್ಮಾಪಕರು ಅವರ ಕಾಲ್​ಶೀಟ್​ಗೆ ಕಾದು ಕೂತಿದ್ದಾರೆ. ಪೂಜಾಳನ್ನು ಹುಡುಕಿಕೊಂಡು ಹೊಸ, ಹೊಸ ಸಿನಿಮಾಗಳು ಬರ್ತಿವೆ ಎನ್ನುವ ಸುದ್ದಿ ಹಬ್ಬಿದೆ. ಇದರ ಜೊತೆಗೆ ಪೂಜಾ ಹೆಗ್ಡೆ ಮಹೇಶ್ ಬಾಬು ನಟನೆಯ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮುಂದಿನ ಸಿನಿಮಾಗೆ ಆಯ್ಕೆಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button