Breaking NewsLatestಮೆಟ್ರೋರಾಜ್ಯ

ಬಿಎಸ್​ವೈ ಅವಧಿಯ ರಾಜಕೀಯ, ಮಾಧ್ಯಮ ಸಲಹೆಗಾರರಿಗೆ ಕೊಕ್

ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ನೇಮಕಗೊಂಡಿದ್ಧ 10 ಹುದ್ದೆಗಳನ್ನ ರಾಜ್ಯ ಸರ್ಕಾರ ರದ್ಧು ಮಾಡಿದೆ.

ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂ.ಪಿ ರೇಣುಕಾಚಾರ್ಯ, ಡಿಎನ್ ದೇವರಾಜ್, ಎನ್ ಆರ್ ಸಂತೋಷ್, ಮಾಧ್ಯಮ ಸಲಹೆಗಾರರಾಗಿದ್ದ ಎನ್.ಬೃಂಗೇಶ್, ಮಾಧ್ಯಮ ಸಂಯೋಜಕರಾಗಿದ್ದ ಸುನೀಲ್​​​ ಜಿ ಎಸ್, ಕಾನೂನು ಸಲಹೆಗಾರ ಮೋಹನ್ ಲಿಂಬೆಕಾಯಿ, ನೀತಿನಿರೂಪಣೆ ಸಲಹೆಗಾರರು, ದೆಹಲಿ ಪ್ರತಿನಿಧಿ, ಆಡಳಿತ ಸಲಹೆಗಾರರನ್ನ ಸೇವೆಯಿಂದ ಬಿಡುಗಡೆ ಗೊಳಿಸಲಾಗಿದೆ.

ಬಿಎಸ್ ವೈ ಅವಧಿಯಲ್ಲಿನ 10 ಹುದ್ಧೆಗಳನ್ನ ರದ್ಧುಗೊಳಿಸಿ ಡಿಪಿಎಆರ್ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ. ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಬೊಮ್ಮಾಯಿ ಇದೀಗ ಹೊಸ ಸಚಿವ ಸಂಪುಟ ರಚನೆಗಾಗಿ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button