Breaking NewsLatestರಾಜಕೀಯರಾಷ್ಟ್ರೀಯ

ಜಂಟಿ ಹೇಳಿಕೆ ಬೆನ್ನಲ್ಲೇ ಸಂಘರ್ಷದ ಹಳೇ ವಿಡಿಯೋ ಬಿಡುಗಡೆ ಮಾಡಿದ ಚೀನಾ

ನವದೆಹಲಿ: ಪೂರ್ವ ಲಡಾಖ್​ನಲ್ಲಿನ ಉದ್ವಿಗ್ನ ಸ್ಥಿತಿ ತಗ್ಗಿಸಲು ಕಮಾಂಡರ್​ಗಳ ಮಟ್ಟದ ಮಿಲಿಟರಿ ಮಾತುಕತೆ ಜಾರಿಯಲ್ಲಿರಲಿದೆ ಎಂದು ಭಾರತ ಮತ್ತು ಚೀನಾ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಮಾರನೇ ದಿನವೇ ಎರಡೂ ದೆಶಗಳ ಸೇನೆಯ ನಡುವನ ಸಂಘರ್ಷದ ವಿಡಿಯೋವನ್ನು ಚೀನಾ ಬಿಡುಗಡೆ ಮಾಡಿರುವುದು ಮತ್ತೊಮ್ಮೆ ಅದರ ಕುಟಿಲತನವನ್ನು ಬಹಿರಂಗಗೊಳಿಸಿದೆ.

ಕಳೆದ ವರ್ಷದ ಜೂನ್ 15ರಂದು ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ನಡುವಿನ ಸೈನಿಕರ ನಡುವೆ ನಡೆದ ಸಂಘರ್ಷದ ವಿಡಿಯೋ ಇದಾಗಿದೆ. ಎತ್ತರದ ಪ್ರದೇಶದಿಂದ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ಕಲ್ಲುಗಳನ್ನು ಎಸೆಯುತ್ತಿರುವುದನ್ನು ಚೀನಾ ಸಾಮಾಜಿಕ ತಾಲತಾಣಗಳಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋ ಕ್ಲಿಪ್ ತೋರಿಸುತ್ತಿದೆ.

1962ರ ಯುದ್ಧಾನಂತರದ ಅತಿ ಕೆಟ್ಟ ಸನ್ನಿವೇಶ ಎರಡೂ ದೇಶಗಳ ನಡುವೆ ಕಳೆದ ಮಾರ್ಚ್​ನಲ್ಲಿನ ಈ ಸಂಘರ್ಷದಿಂದಾಗಿ ತಲೆದೋರಿತ್ತು. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತಪಟ್ಟಿರುವುದಾಗಿ ಭಾರತ ಅಧಿಕೃತವಾಗಿ ಪ್ರಕಟಿಸಿತ್ತು. ತನ್ನ ಕಡೆಯ ನಾಲ್ವರು ಸತ್ತಿರುವುದಾಗಿ ಚೀನಾ ಹೇಳಿಕೊಂಡಿತ್ತು.

ಇದಾದ ಬಳಿಕ 12 ಸುತ್ತು ಮಿಲಿಟರಿ ಮಾತುಕತೆ ಮಾತುಕತೆ ನಡೆದಿದ್ದು, ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳು ಸಮ್ಮತಿಸಿವೆ. ಶನಿವಾರ 9 ಗಂಟೆಗಳಷ್ಟು ದೀರ್ಘ ಅವಧಿಯ ಮಾತುಕತೆ ನಡೆಯಿತಾದರೂ ಗಡಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇದು ಫಲಪ್ರದವಾಗಿಲ್ಲ ಎನ್ನಲಾಗಿದೆ.

ಈ ವಿಚಾರದಲ್ಲಿ ಅಭಿಪ್ರಾಯ ವಿನಿಮಯ ಎರಡೂ ದೇಶಗಳ ನಡುವೆ ನಡೆದಿದೆ. ಮತ್ತು ಮಾತುಕತೆ ಮುಂದೆಯೂ ಜಾರಿಯಲ್ಲಿರಲಿದೆ ಎಂದು ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದಾದ ಬೆನ್ನಲ್ಲೇ ಚೀನಾ ಹಳೇ ವಿಡಿಯೋ ಬಿಡುಗಡೆಗೊಳಿಸಿರುವುದು, ಸಂಘರ್ಷವನ್ನು ಜೀವಂತವಾಗಿಡುವ ತಂತ್ರದಂತೆ ಕಾಣಿಸುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button