
ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನ 31ರಂದು ಆರಂಭವಾಗಲಿದೆ. ಅಧಿಕಾರ ನಿರ್ಗಮಿಸುವ ಹೊಸ್ತಿಲಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದೇ 31 ರಂದು ಜಂಟಿ ಸಂಸತ್ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದೇ ದಿನ ಸಂಸತ್ ನ ಸುಗಮ ಕಲಾಪ ಸಂಬಂಧ ಸರ್ವ ಪಕ್ಷಗಳ ಸಭೆ ಕೂಡ ನಡೆಯಲಿದೆ.
ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022- 23 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿನ ಕಲಾಪವನ್ನು ಪಾಳಿ ಆಧಾರದಲ್ಲಿ ನಡೆಸಲು ಸಂಸದೀಯ ವ್ಯವಹಾರಗಳ ಸಚಿವಾಲಯ ನಿರ್ಧಾರ ಮಾಡಿದೆ.
ಬಜೆಟ್ ಅಧಿವೇಶನ ಎರಡು ಚರಣದಲ್ಲಿ ನಡೆಯಲಿದೆ ಜನವರಿ 31ರಿಂದ ಫೆಬ್ರವರಿ 11 ರವರೆಗೆ ಮೊದಲ ಚರಣ ಹಾಗೂ ಮಾರ್ಚ್ 14ರಿಂದ ಏಪ್ರಿಲ್ 8 ರವರೆಗೂ ಬಜೆಟ್ ಅಧಿವೇಶನ ಮುಂದುವರಿಯಲಿದೆ.
