Breaking NewsLatestಬಾಲಿವುಡ್ಮನರಂಜನೆಸಿನಿಮಾಸೆಲೆಬ್ರಿಟಿ

ವಿಲ್​ ಸ್ಮಿತ್​ಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿ

ಕಳೆದೆರಡು ವರ್ಷಗಳು ಕೋವಿಡ್ ನಿಂದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಸಿಂಪಲ್ ಆಗಿ ಹೋಗುತ್ತಿತ್ತು. ಇದೀಗ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮತ್ತೆ ಕಳೆಬಂದಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ದೂರಿಯಾಗಿ ನಡೆದಿದೆ. ರೆಡ್ ಕಾರ್ಪಟೆ ಮೇಲೆ ಸೆಲೆಬ್ರಿಟಿಗಳು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಖ್ಯಾತ ನಟ ವಿಲ್ ಸ್ಮಿತ್ ಅವರು ಕಿಂಗ್ ರಿಚರ್ಡ್ ಎಂಬ ಸಿನಿಮಾ ಅಭಿನಯಕ್ಕಾಗಿ ಅತ್ಯತ್ತುಮ ನಟ ಪ್ರಶಸ್ತಿ ಲಭಿಸಿದೆ. ‘ದಿ ಐಸ್​ ಆಫ್​ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್​ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು ಆಸ್ಕರ್​ ಸಮಾರಂಭವನ್ನು ಹೋಸ್ಟ್​ ಮಾಡಿದ್ದಾರೆ.
94ನೇ ಅಕಾಡೆಮಿ ಅವಾರ್ಡ್ಸ್​ನಲ್ಲಿ ಪ್ರಶಸ್ತಿ ಪಡೆದ ಸೆಲೆಬ್ರಿಟಿಗಳ ವಿವರ ಇಲ್ಲಿದೆ
ಅತ್ಯುತ್ತಮ ನಟ: ವಿಲ್​ ಸ್ಮಿತ್​ (ಸಿನಿಮಾ- ಕಿಂಗ್​ ರಿಚರ್ಡ್​)
ಅತ್ಯುತ್ತಮ ನಟಿ: ಜೆಸಿಕಾ ಚಾಸ್ಟೇನ್​ (ಸಿನಿಮಾ- ದಿ ಐಸ್​ ಆಫ್​ ಟ್ಯಾಮಿ ಫೇ)

ಅತ್ಯುತ್ತಮ ಸಿನಿಮಾ: ಕೋಡಾ (ನಿರ್ದೇಶನ- ಶಾನ್​ ಹೆಡರ್​)

ಅತ್ಯುತ್ತಮ ನಿರ್ದೇಶನ: ಜೇನ್​ ಕಾಂಪಿಯನ್​ (ಸಿನಿಮಾ- ದಿ ಪವರ್​ ಆಫ್ ದಿ​ ಡಾಗ್​)

ಅತ್ಯುತ್ತಮ ಒರಿಜಿನಲ್​ ಸಾಂಗ್​: ನೋ ಟೈಮ್​ ಟು ಡೈ

ಅತ್ಯುತ್ತಮ ಅಡಾಪ್ಟೆಡ್​ ಸ್ಕ್ರೀನ್​ ಪ್ಲೇ: ಶಾನ್​ ಹೆಡರ್​ (ಸಿನಿಮಾ- ಕೋಡಾ)

ಅತ್ಯುತ್ತಮ ವಸ್ತ್ರ ವಿನ್ಯಾಸ: ಜೆನ್ನಿ ಬೀವನ್​ (ಸಿನಿಮಾ: ಕ್ರುವೆಲ್ಲಾ)

Spread the love

Related Articles

Leave a Reply

Your email address will not be published. Required fields are marked *

Back to top button