Breaking NewsLatestರಾಜ್ಯಹುಬ್ಬಳ್ಳಿ - ಧಾರವಾಡ

ಧಾರವಾಡ ಎಸ್​ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಹೊಸ 77 ಕೋವಿಡ್ ಕೇಸ್ ದೃಢ; ಆಸ್ಪತ್ರೆ ಓಪಿಡಿ ಕಾರ್ಯ ಸ್ಥಗಿತ

ಧಾರವಾಡ: ಕಳೆದ ಮೂರು ದಿನಗಳಿಂದ ಧಾರವಾಡ ಸತ್ತೂರಿನ ಎಸ್ ಡಿ ಎಮ್‌ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಮಾಹಾಮಾರಿ ವೈರಸ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದ್ದು, ಮತ್ತೆ ಕಳೆದ ದಿನ ಮಧ್ಯರಾತ್ರಿ ರಿಪೋರ್ಟ್‌ನಲ್ಲಿ 77 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಮಾಹಾಮಾರಿ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕಾಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈಗಾಗಲೇ ಎಸ್ ಡಿ ಎಮ್ ಆಸ್ಪತ್ರೆ ಓಪಿಡಿ ಕಾರ್ಯವನ್ನು ಸಂಪೂರ್ಣ ಸ್ಥಗಿತ ಮಾಡಲಾಗಿದೆ.

ನ. 17 ರಂದು ಎಸ್‌ಡಿಎಮ್‌ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಡಾ.ವಿರೇಂದ್ರ ಹೆಗ್ಗಡೆ ಕಾಲಾ ಕ್ಷೇತ್ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ ಈ ಮೊದಲು 66 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಅದರ ನಂತರ ಕಾರ್ಯಕ್ರಮದಲ್ಕಿ ಭಾಗಿಯಾಗಿ ವಿದ್ಯಾರ್ಥಿಗಳನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿದ್ದು (ನ.26 ರಂದು) ಅದರಲ್ಲಿ 116 ಜನ ವಿದ್ಯಾರ್ಥಿಗಳಿಗೆ ಪಾಸಿಟ್ವ್ ಬಂದಿತ್ತು. ಈಗ ಕಳೆದ ದಿನ ಮತ್ತಷ್ಟು ಜನ ವಿದ್ಯಾರ್ಥಿಗಳ ಟೆಸ್ಟ್ ವರದಿ ಬಂದಿದ್ದು, ಅದರಲ್ಲಿ 77 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ಸೋಕಿಂತರ ಸಂಖ್ಯೆ 281ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ‌

ಕಳೆದ ನವೆಂಬರ್ 17 ರಂದು ಎಸ್ ಡಿ ಎಮ್ ಮೆಡಿಕಲ್ ಕಾಲೇಜು ಪಕ್ಕದಲ್ಲಿನ ಡಾ.ವಿರೇಂದ್ರ ಹೆಗ್ಗಡೆ ಕಾಲಾ ಕ್ಷೇತ್ರದಲ್ಲಿ ನಡೆದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಕಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದ್ದು, ಅದರಲ್ಲಿ ಭಾಗಿಯಾದ ಬಹುತೇಕರಲ್ಲಿ ಕೊರೊನಾ ಪಾಸಿಟಿವ್ ವರದಿ ಬರುತ್ತಿದೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರಿಗೆ ಹಾಗೂ ಅಲ್ಲಿರು ಸ್ಟಾಫ್ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ಒಟ್ಟು 1822 ಜನರ ವರದಿಯು ಇನ್ನೂ ಬರಬೇಕಾಗಿದ್ದು, ಮತ್ತಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ‌.

ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಕೊರೊನಾ ಮಾಹಾಮಾರಿ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸೂಚನೆ ಮೇರೆಗೆ, ಈಗ ಆಸ್ಪತ್ರೆಯ ಓಪಿಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.‌ ಕೇವಲ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಒಳ ರೋಗಿಗಳ ಜೊತೆಗೆ ಒಬ್ಬರು ಸದಸ್ಯರಿಗೆ ಇರಲು ಅವಕಾಶ ನೀಡಲಾಗಿದೆ. ಹೊರಗಡೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ.‌ ಸದ್ಯ ಎಸ್‌ಡಿಎಮ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸೀಲ್ಡ್ ಡೌನ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದ್ದು, ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.‌

ಒಟ್ಟಿನಲ್ಲಿ ಧಾರವಾಡ ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡ ಮಾಹಾಮಾರಿ ವೈರಸ್ ಈಗ ಕ್ರಮೇಣ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಆದರೆ ಈಗಾಗಲೇ ಕೋವಿಡ್ ಪಾಸಿಟಿವ್ ಬಂದ್ ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆಯನ್ನು ಎಸ್ ಡಿ ಎಮ್ ಮೆಡಿಕಲ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯವು ಸ್ಥಿರವಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ‌

Spread the love

Related Articles

Leave a Reply

Your email address will not be published. Required fields are marked *

Back to top button