
ವಾಷಿಂಗ್ಟನ್: ನ್ಯಾಟೋ ಒಗ್ಗಟ್ಟಿನೊಂದಿಗೆ ಉಕ್ರೇನ್ ಜತೆ ನಿಂತಿದೆ ಎಂದು ಹೇಳಿದೆ. ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸಸ್ ಸ್ಟೋಲ್ಟನ್ ಬರ್ಗ್, ಯುರೋಪಿಯನ್ ಯೂನಿಯನ್ ಮತ್ತು ವಿಶ್ವಾದ್ಯಂತ ಇತರೆ ಪಾಲುದಾರರೊಂದಿಗೆ ನಿಕಟ ಸಮನ್ವಯದೊಂದಿಗೆ ನ್ಯಾಟೋ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿವೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಬೆಂಬಲ ನೀಡಲು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು. ಉಕ್ರೇನ್ ನಲ್ಲಿ ದೂರದರ್ಶನದ ಹೇಳಿಕೆಯಲ್ಲಿ ರಷ್ಯಾ ಯುರೋಪ್ ನಲ್ಲಿ ಯುದ್ಧ ಆರಂಭಿಸಿದೆ ಮತ್ತು ಯಾವುದೇ ಪ್ರಚೋದನೆ ಅಥವಾ ವಿಶ್ವಾಸಾರ್ಹತೆಯನ್ನು ಕ್ಷಮಿಸದೇ ಸ್ನೇಹಪರ ದೇಶದ ಮೇಲೆ ದಾಳಿ ಮಾಡಿದೆ ಎಂದು ದೂರಿದರು.
ಟರ್ಕಿ ಕೂಡ ಉಕ್ರೇನ್ ಗೆ ತನ್ನ ಬೆಂಬಲ ಘೋಷಿಸಿದೆ. ತನ್ನ ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸುವುದನ್ನು ಮುಂದುವರಿಸುವುದಾಗಿಇ ಹೇಳಿದೆ.
ಯುರೋಪಿಯನ್ ಕಮೀಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆಎನ್ ಟಿವಿ ಭಾಷಣದಲ್ಲಿ ಯುರೋಪಿಗೆ ಯುದ್ದವನ್ನು ಮರಳಿ ತರುವ ಜವಾಬ್ದಾರಿಯನ್ನು ಅಧ್ಯಕ್ಷಷ ಪುಟಿನ್ ಹೊಂದಿದ್ದಾರೆ ಮತ್ತು ಯುರೋಪಿಯನ್ ಯೂನಿಯನ್ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುತ್ತದೆ ಎಂದಿದ್ದಾರೆ.
ಮತ್ತೊಂದೆಸೆ, ಉಕ್ರೇನ್ ನಲ್ಲಿ ಯುದ್ಧವು “ನ್ಯಾಟೋದ ಪ್ರಚೋದನಾಕಾರಿ ಕ್ರಮಗಳಿಂದ ಉಂಟಾಗಿದೆ ಎಂದು ಇರಾನ್ ಹೇಳಿದೆ.
