Breaking Newsಮೆಟ್ರೋರಾಜ್ಯ

ನಾಡಗೀತೆ ಹಾಡಲು ಸಮಯ ಮಿತಿ ಅ.2ರೊಳಗೆ ನಿರ್ಧಾರ; ಸಂಸ್ಕೃತಿ ಸಚಿವರ ಸ್ಪಷ್ಟನೆ

ಬೆಂಗಳೂರು: ನಾಡಗೀತೆಯನ್ನು ಎಷ್ಟು ಸಮಯದೊಳಗೆ ಹಾಡಬೇಕೆಂಬುದನ್ನು ನಿರ್ಧರಿಸಲು ಪರಿಣತರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್​ಕುಮಾರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಈ ಕುರಿತ ಫ್ರಶ್ನೆಗೆ ಉತ್ತರ ನೀಡಿದ ಅವರು, ಸಮಿತಿಯು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಪರಿಣತರನ್ನು ಒಳಗೊಂಡಿದ್ದು, ಹದಿನೈದು ದಿನಗಳೊಳಗೆ ವರದಿ ಕೊಡುವಂತೆ ಸೂಚಿಸಲಾಗಿದೆ ಎಂದರು.

ನಾಡಗೀತೆ ಕುರಿತ ನಿರ್ಧಾರ ವಿಚಾರ ಬಹಳ ಕಾಲದಿಂದಲೂ ಹಾಗೇ ಇರುವುದರಿಂದ ಇದಕ್ಕೊಂದು ಪರಿಹಾರವನ್ನು ಬೇಗ ಸೂಚಿಸುವಂತೆ ಸ್ಪೀಕರ್ ಕಾಗೇರಿ ಅವರೂ ಸಚಿವರನ್ನು ಕೇಳಿಕೊಂಡರು. ಅಕ್ಟೋಬರ್ 2ರೊಳಗೆ ನಿರ್ಧಾರ ಪ್ರಕಟಿಸುವುದಾಗಿ ಸದನಕ್ಕೆ ಸುನೀಲ್​ಕುಮಾರ್ ಸ್ಪಷ್ಟಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button