ಮೈಸೂರು : ಇಂದಿನಿಂದ ಶಾಲೆಗಳು ಆರಂಭ: ಉತ್ಸಾಹದಿಂದ ಆಗಮಿಸಿದ ವಿದ್ಯಾರ್ಥಿಗಳು

ಮೈಸೂರು: ಮೈಸೂರಿನಲ್ಲಿ ಕೂಡ ಶಾಲೆಗಳು ಇಂದಿನಿಂದ ಆರಂಭವಾಗಿದೆ. ಕೊರೊನಾ ಹಿನ್ನೆಲೆ ಕಳೆದ ಒಂದುವರೆ ವರ್ಷದಿಂದ ಮನೆಯಲ್ಲೆ ಕುಳಿತು ಬೋರ್ ಆಗಿದ್ದ ವಿದ್ಯಾರ್ಥಿಗಳು ಇಂದು ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದಾರೆ.
ಮೈಸೂರಿನ ನಿರ್ಮಲಾ ಕಾನ್ವೆಂಟ್, ಮರಿಮಲ್ಲಪ್ಪ, ಸೈಂಟ್ ಮೇರಿಸ್ ಸೇರಿದಂತೆ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 60 ರಷ್ಟಿದೆ. ಶಾಲೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಥರ್ಮ ಮೀಟರ್ ಚೆಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆಯ ನಿಯಮ ಸರ್ಕಾರದ ಕೊರೊನಾ ಮಾರ್ಗಸೂಚಿಯನ್ನು ಎಲ್ಲಾ ಶಾಲೆಗಳು ಅನುಸರಿಸಿವೆ.
ಮೈಸೂರಿನ ಸೈಂಟ್ ಮೇರಿಸ್ ಶಾಲೆಯಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಾಲೆಗೆ ಮಾವನ ಸೊಪ್ಪು, ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ವಿದ್ಯಾರ್ಥಿಗಳನ್ನು ಅದ್ದೂರಿಯಿಂದ ಬರಮಾಡಿಕೊಳ್ಳಲಾಗಿತ್ತು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲೆಗಳು ತೆರೆದರೆ, ಕೊಡಗಿನಲ್ಲಿ ಮಾತ್ರ ಶಾಲೆಗಳ ಆರಂಭವಿಲ್ಲ. ಕೊರೊನಾ ಸೋಂಕಿನ ಪ್ರಮಾಣ ಶೇಕಡ 2 ರಷ್ಟಿರುವ ಕಾರಣ ಶಾಲೆ ಆರಂಭಕ್ಕೆ ಅನುಮತಿ ನೀಡಿಲ್ಲ. ಭೌತಿಕ ತರಗತಿ ಬದಲು ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
