Breaking Newsಕಲಬುರ್ಗಿಜಿಲ್ಲಾ ಸುದ್ದಿ
ಶೃಂಗಾರಗೊಂಡ ಕಲಬುರ್ಗಿ ಶಾಲೆಗಳು: ಶಾಲೆಯತ್ತ ಮರಳಿದ ಮಕ್ಕಳಿಗೆ ಆತ್ಮಿಯ ಸ್ವಾಗತ
ಕಲಬುರ್ಗಿ: ಸರ್ಕಾರದ ಆದೇಶದಂತೆ ಎಲ್ಲ ಶಾಲೆ, ಪಿಯು ಕಾಲೇಜುಗಳಲ್ಲೂ ಭೌತಿಕ ತರಗತಿಗಳು ಇಂದಿನಿಂದ ಆರಂಭಗೊಳ್ಳುತ್ತೇವೆ. ಇದಕ್ಕಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಶಾಲೆಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡಿವೆ.
ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ರಜೆ ಘೋಷಣೆಯಾಗಿದ್ದ ಶಾಲೆಗಳು, ಕೋವಿಡ್ ಉಲ್ಬನ ಇರುವ ಜಿಲ್ಲೆಗಳು ಹೊರತುಪಡಿಸಿ ಇನ್ನುಳಿದ 26 ಜಿಲ್ಲೆಗಳಲ್ಲಿ ಇಂದಿನಿಂದ 9 ರಿಂದ 12 ನೇ ತರಗತಿ ವರೆಗಿನ ಶಾಲಾ ಕಾಲೇಜು ಆರಂಭಗೊಳ್ಳುತ್ತಿವೆ. ಮಕ್ಕಳ ಆಗಮನಕ್ಕಾಗಿ ಶೃಗಾಂರಗೊಂಡು ನಿಂತ ಶಾಲೆಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.
ಕಲಬುರಗಿ ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲೆಗೆ ಶೃಂಗಾರ ಮಾಡಲಾಗಿದೆ. ಶಾಲೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಹೂವಿನ ಹಾರ ಹಾಕಿ ಮಾವಿನ ತೋರಣ ಶಿಕ್ಷಕರು ಕಟ್ಟಿದ್ದಾರೆ.
ಮಕ್ಕಳು ಒಬ್ಬೊಬ್ಬರಾಗಿ ಶಾಲೆಗೆ ಆಗಮಿಸುತ್ತಿದ್ದು, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಾಕ್ಸ್ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಸ್ಯಾನಿಟೈಸ್ ಮಾಡಿ ಕ್ಲಾಸ್ ರೂಮ್‌ವೊಳಗೆ ಬಿಡಲಾಗುತ್ತಿದೆ.
