Breaking NewsLatestಮೆಟ್ರೋರಾಜ್ಯಸುದ್ದಿ
ಪ್ರಧಾನಿ ಮೋದಿಗಾಗಿ ಬೆಂಗಳೂರಿನಲ್ಲಿ ಮೃತ್ಯುಂಜಯ ಹೋಮ

ಬೆಂಗಳೂರು: ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಮಹಾ ಮೃತ್ಯುಂಜಯ ಹಾಗೂ ಸುದರ್ಶನ ಹೋಮ ಅಯೋಜಿಸಲಾಗಿದೆ. ಶುಕ್ರವಾರ ಬೆಳಗ್ಗೆ 7:30 ರಿಂದ 12: 30 ವರೆಗೆ ಸಂಜಯ ನಗರ ಸಮೀಪದ ಭೂಪಸಂದ್ರದ ಅಭಯ ಆಂಜನೇಯ ಸ್ವಾಮಿ ದೇಗುಲದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಯಸ್ಸು ವೃದ್ದಿ, ಉತ್ತಮ ಆರೋಗ್ಯ ಹಾಗೂ ಯಶಸ್ಸಿಗೆ ಹಾರೈಸಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ 150 ಮಂದಿ ಪರೋಹಿತರಿಂದ ಹೋಮ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ ಮೋದಿಯವರ ಯಶಸ್ಸಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ : ಎಸ್ ಎಸ್ ಪಾಟೀಲ್ : 9620615965.
