Breaking NewsLatestಜಿಲ್ಲಾ ಸುದ್ದಿಮಂಡ್ಯ

ಹನಕೆರೆಯಲ್ಲಿ ಮನೆ ನಿರ್ಮಾಣಕ್ಕೆ ಸಂಸದೆ ಸುಮಲತಾ ಭೂಮಿ ಪೂಜೆ

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಮಂಡ್ಯದಲ್ಲಿ ಮನೆ ಕಟ್ಟಿಸಲು ಬುಧವಾರ ಭೂಮಿ ಪೂಜೆ ನೆರವೇರಿಸಿದ್ದಾರೆ.

ಮಂಡ್ಯ ಹಾಗೂ ಮದ್ದೂರಿಗೆ ಹತ್ತಿರವಾಗುವ ಕಾರಣ ಹನಕೆರೆಯಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಇದರೊಂದಿಗೆ, ಮಂಡ್ಯದಲ್ಲಿಯೇ ಮನೆ ಮಾಡುವುದಾಗಿ ಚುನಾವಣೆ ವೇಳೆ ಹೇಳಿದ್ದ ಮಾತು ಉಳಿಸಿಕೊಂಡಿರುವೆ ಎಂದು ಸುಮಲತಾ ಹೇಳಿದ್ದಾರೆ.

ಮಂಡ್ಯ ಮಣ್ಣಿನ ತಿಲಕ ಹಚ್ಚಿ ಅಂಬರೀಷ್ ಅವರನ್ನು ಕಳುಹಿಸಿಕೊಟ್ಟಿದ್ದೇವೆ. ಇಲ್ಲೇ ವಾಸ ಮಾಡಬೇಕು ಎಂಬುದು ನನ್ನ ಹಾಗೂ ಅಭಿ ಆಸೆ ಎಂದು ಅವರು ಹೇಳಿದರು.

ಅಭಿಷೇಕ್ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಯೂ ಸುಮಲತಾ ಅವರಿಗೆ ಎದುರಾಯಿತು. ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ ಎಂಬುದು ಅವರ ಉತ್ತರವಾಗಿತ್ತು. ಅಭಿಷೇಕ್ ಕೂಡ ಇದೇ ರೀತಿಯಲ್ಲಿ ಉತ್ತರಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button