
ಮೈಸೂರು: ರಷ್ಯಾ ಹಾಗೂ ಉಕ್ರೇನ್ ಯುದ್ಧ ಪರಿಸ್ಥಿತಿ ತೀವ್ರಗೊಂಡಿದ್ದು, ಉಕ್ರೇನ್ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಈಗಾಗ್ಲೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು, ಸಾಕಷ್ಟು ಮಂದಿಯನ್ನ ಕರೆ ತಂದಿದೆ. ಈ ಮಧ್ಯೆ 2 ದಿನಗಳ ಹಿಂದೆ ಉಕ್ರೇನ್ನಿಂದ ಭಾರತಕ್ಕೆ ಬಂದಿಳಿದ ಎಂಬಿಬಿಎಸ್ ವಿದ್ಯಾರ್ಥಿಗಳು ಉಕ್ರೇನ್ಗೆ ಕಾಲಿಡಲು ಭಾರತ ಸರ್ಕಾರಕ್ಕೆ ಗಡ್ಸ್ ಇಲ್ಲ ಎಂದಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ , ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್ನಿಂದ ರಕ್ಷಿಸುತ್ತಿದ್ದಾರೆ ಎಂದಿದ್ದಾರೆ.
ಉಕ್ರೇನಲ್ಲಿರೋ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಯುದ್ದಕ್ಕೂ ಮುನ್ನ ಅಲ್ಲಿರೋ ಭಾರತೀಯರಿಗೆ ಮೂರು ಬಾರಿ ಸಲಹೆ ಕೊಟ್ಟಿದ್ದೆವು. ಉಕ್ರೇನ್ನಿಂದ ಹೊರಟ್ಟು ಬನ್ನಿ ಅಂತ ಮೊದಲೇ ಹೇಳಲಾಗಿತ್ತು. ಆದ್ರೆ ಯಾರು ಕೇಳಲಿಲ್ಲ. ಈಗ ತೆರಿಗೆ ಹಣದಿಂದ ಅವರನ್ನು ವಿಮಾನದಲ್ಲಿ ಕರೆದುಕೊಂಡು ಬರಲಾಗ್ತಿದೆ. ಉಕ್ರೇನ್ನಿಂದ ಭಾರತ ಸರ್ಕಾರ ಅವರನ್ನ ರಕ್ಷಿಸಿ ಕರೆದುಕೊಂಡು ಬರುತ್ತಿದೆ, ಆದ್ರೆ ಕೆಲವರು ಕೃತಜ್ಞತೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಉಕ್ರೇನ್ನಿಂದ ಭಾರತಕ್ಕೆ ಬಂದ ವಿದ್ಯಾರ್ಥಿಗಳ ಹೇಳಿದ್ದೇನು?
ಮಾರ್ಚ್ 2 ರಂದು ಉಕ್ರೇನ್ನಿಂದ ಭಾರತಕ್ಕೆ ಬಂದಿಳಿದ ನಾಲ್ವರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರಕ್ಕೆ ವಿರುದ್ಧ ಕಿಡಿಕಾರಿದ್ದರು. ನಾವು ಉಕ್ರೇನ್ನಲ್ಲಿದ್ದ ವೇಳೆ ನಮಗೆ ಸಹಾಯ ಮಾಡಿದ್ದು ಹಂಗೇರಿ ಸರ್ಕಾರ ಹಾಗೂ ಚಾರಿಟಿ ಟ್ರಸ್ಟ್ಗಳು. ಸ್ವತಃ ಹಣದಿಂದ ನಾವು ಟ್ಯಾಕ್ಸಿ ಮಾಡಿಕೊಂಡು ಉಕ್ರೇನ್ನಲ್ಲಿ ಸುರಕ್ಷಿತ ಸ್ಥಳಕ್ಕೆ ತಲುಪಿದ್ದೇವೆ. ನಮಗೆ ಊಟ, ತಿಂಡಿ ತಂದುಕೊಟ್ಟಿದ್ದು ಚಾರಿಟಿ ಟ್ರಸ್ಟ್ಗಳೆ ಹೊರತು ಭಾರತ ಸರ್ಕಾರ ಅಲ್ಲ. ಉಕ್ರೇನ್ಗೆ ಕಾಲಿಡಲು ಭಾರತ ಸರ್ಕಾರಕ್ಕೆ ಗಡ್ಸ್ ಇಲ್ಲ ಎಂದು ಕೆಲ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ರು.
