Breaking Newsಬೆಳಗಾವಿರಾಜ್ಯ
ಸರ್ಕಾರಿ ಕಾರು ದುರ್ಬಳಕೆ; ಸಾಮಾಜಿಕ ಜಾಲತಾಣದಲ್ಲಿ ಶಾಸಕ ಐಹೊಳೆ ಮಗನ ವಿಡಿಯೊ

ಬೆಳಗಾವಿ: ರಾಜ್ಯ ಸರ್ಕಾರ ಶಾಸಕರಿಗೆ ನೀಡಿದ ಸರ್ಕಾರಿ ಕಾರಿನಲ್ಲಿ ಶಾಸಕರ ಮಗ ಓಡಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೋಳೆ ಅವರ ಮಗನೇ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿ.


ಆದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಬಾಗ ಶಾಸಕ ದುರ್ಯೋಧನ ಐಹೊಳೆಗೆ ಸರ್ಕಾರ ಓಡಾಡಲು ಇನ್ನೋವಾ ಕಾರ್ ನೀಡಿದೆ. ಈ ಸರ್ಕಾರಿ ವಾಹನವನ್ನು ಶಾಸಕರು ತಮ್ಮ ಮಗನಿಗೆ ನೀಡಿದ್ದು, ತಾವು ಮಾತ್ರ ತಮ್ಮ ಹಳೆಯ ವಾಹನದಲ್ಲಿ ಓಡಾಡುತ್ತಿದ್ದಾರೆ.
ಸದ್ಯ ಶಾಸಕರ ಹಿರಿಯ ಪುತ್ರ ಅರುಣ್ ಐಹೊಳೆ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ಶಾಸಕರದು ಮಾತ್ರ ಅಲಕ್ಷ್ಯದ ಪ್ರತಿಕ್ರಿಯೆ.
