Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಹರ್ಷ ಹತ್ಯೆಗೆ ಸಚಿವ ಈಶ್ವರಪ್ಪ ಪರೋಕ್ಷ ಕಾರಣ: ಬಿ.ಕೆ.ಹರಿಪ್ರಸಾದ್ ಆರೋಪ

ಬೆಂಗಳೂರು: ಶಿವಮೊಗ್ಗದಲ್ಲಿ ಹರ್ಷ ಕೊಲೆಗೆ ಸಚಿವ ಈಶ್ವರಪ್ಪ ಅವರೇ ಪರೋಕ್ಷ ಕಾರಣವಾಗಿರಬಹುದು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಈಶ್ವರಪ್ಪ ವಿರುದ್ಧ ವಿಧಾನಮಂಡಲದ ಉಭಯ ಸದನಗಳಲ್ಲಿ ನಾವು ಈಗಾಗಲೇ ಧರಣಿ ಆರಂಭಿಸಿದ್ದೇವೆ. ಅದರಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ಅವರೇ ಈ ಕೃತ್ಯ ಮಾಡಿಸಿರಬೇಕು ಎಂಬ ಶಂಕೆ ಇದೆ ಎಂದರು.   

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕೊಲೆ ಮತ್ತು ಹಲ್ಲೆಗಳ ಆರೋಪವನ್ನು ಮುಸ್ಲಿಮರ ಮೇಲೆ ಹೊರಸುವುದು ಬಿಜೆಪಿಯವರ ಫ್ಯಾಷನ್. ಶಿವಮೊಗ್ಗದಲ್ಲಿ ಈ ಹಿಂದೆ ಇದೇ ರೀತಿ ಹತ್ಯೆ ಘಟನೆ ನಡೆದಾಗ ಅದನ್ನು ಅಲ್ಪಸಂಖ್ಯಾತರು ಮಾಡಿದ್ದು ಎಂದು ಗೂಬೆ ಕೂರಿಸುವ ಯತ್ನ ಈಶ್ವರಪ್ಪ ಮಾಡಿದ್ದರು. ಬಳಿಕ ಆ ಸಮುದಾಯದವರಲ್ಲ, ಬೇರೆ ಸಮುದಾಯದವರು ಎಂದು ಕೋರ್ಟ್ ವಿಚಾರಣೆಯಿಂದ ಗೊತ್ತಾಯಿತು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button