Breaking NewsLatestಆಹಾರಲೈಫ್ ಸ್ಟೈಲ್

ಮಲೆನಾಡು ಶೈಲಿಯ ಮಾವಿನಕಾಯಿ ಅಪ್ಪೆಹುಳಿ? ಮಾಡೋದು ಹೇಗೆ?

ಬೇಸಿಗೆ ಬರುತ್ತಲೇ ಇದು ಮಾವಿನ ಕಾಯಿ ಕಾಲ. ಮಾವಿನ ಕಾಯಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಇಷ್ಟ. ಇದರಲ್ಲಿ ಮಾಡುವಂತಹ ಅಡುಗೆ ಇನ್ನೂ ಇಷ್ಟವಾಗುತ್ತದೆ. ಈಗ ನಾವು ಹೇಳುತ್ತಿರೋದು ಮಲೆನಾಡು ಶೈಲಿಯ ಮಾವಿನಕಾಯಿ ಅಪ್ಪೆ ಹುಳಿ. ಇದು ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಮಾಡುವುದು ಹೇಗೆ ಎಂದು ಹೇಳ್ತೀವಿ ಕೇಳಿ.

ಬೇಕಾಗುವ ಸಾಮಾಗ್ರಿಗಳು:
ಮಾವಿನಕಾಯಿ- 1
ಹಸಿಮೆಣಸು- 4
ಜೀರಿಗೆ- 1 ಚಮಚ
ಸಾಸಿವೆ- 1ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ- 4 ಚಮಚ
ಒಣ ಮೆಣಸಿನಕಾಯಿ- 2
ಬೆಳ್ಳುಳ್ಳಿ- 1
ಮಾಡುವ ವಿಧಾನ
ಮಾವಿನಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲೆ ಚೆನ್ನಾಗಿ ಬೇಯಿಸಿರಿ. ನಂತರ ಒಂದು ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ, ಹಾಗೂ ಮಾವಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ಸಾಸಿವೆ, ಅಡುಗೆ ಎಣ್ಣೆ, ಜೀರಿಗೆ, ಒಣಮೆಣಸು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿದ ಮಾವಿನ ಕಾಯಿ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ಅಗತ್ಯವಿದ್ದಷ್ಟು ಉಪ್ಪು, ನೀರು ಸೇರಿಸಿ ಕುದಿಸಿದರೆ ರುಚಿಯಾದ ಮಾವಿನಕಾಯಿ ಅಪ್ಪೆ ಹುಳಿ ಸವಿಯಲು ಸಿದ್ಧವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button