Breaking NewsLatestಸುದ್ದಿ
LPG Cylinder: ಗ್ರಾಹಕರಿಗೆ ಬಿಗ್ ಶಾಕ್ – ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ

ನವದೆಹಲಿ : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರ್ಕಾರ ಮತ್ತೆ ದರ ಏರಿಕೆಯ ಶಾಕ್ ನೀಡಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ 25 ರೂ. ಏರಿಕೆ ಮಾಡಲಾಗಿದೆ.
ಜುಲೈ 1 ನೇ ತಾರೀಕಿನಂದು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯನ್ನು 25.50 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862.5 ರೂ. ಇದೆ. ದೆಹಲಿಯಲ್ಲಿ ಅಡುಗೆ ಅನಿಲ ದರ 859.5 ರೂ. ಇದೆ. ಮುಂಬೈನಲ್ಲಿ 859.5 ರೂ. ಕೋಲ್ಕತ್ತಾದಲ್ಲಿ 886 ರೂ. ಮತ್ತು ಚೆನ್ನೈನಲ್ಲಿ 875.5 ರೂ. ಇದೆ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಹೊರತುಪಡಿಸಿ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಕೂಡ 68 ರೂ. ದುಬಾರಿಯಾಗಿದೆ. ಈಗ 19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1618 ರೂ.ಗೆ ಏರಿಕೆಯಾಗಿದೆ
