Breaking NewsLatestಟಿವಿಬಾಲಿವುಡ್ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ಮದುವೆಯಾದ ಜೋಡಿ ಎರಡೇ ತಿಂಗಳಲ್ಲಿ ಡಿವೋರ್ಸ್: ಗಿಮಿಕ್ ಮಾಡಲು ಚಾನಲ್ ನವರಿಂದ ಸಿಕ್ಕಿತ್ತು 50 ಲಕ್ಷ ರೂಪಾಯಿ

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿಕೊಳ್ಳೋದು ಸಾಮಾನ್ಯ. ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಕೆಲವರ ಪ್ರೀತಿ ಹಸೆಮಣೆ ವರೆಗೂ ಹೋಗಿದ್ರೆ, ಮತ್ತೊಂದಷ್ಟು ಪ್ರೀತಿಗಳು ಅಲ್ಲೇ ಬ್ರೇಕ್ ಅಪ್ ಆಗಿದ್ದು ಇದೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಮದುವೆಯಾದ ಜೋಡಿಯೊಂದು ಮದುವೆಯಾದ ಎರಡೇ ತಿಂಗಳಿಗೆ ಡಿವೋರ್ಸ್ ಪಡೆದುಕೊಂಡು ನಾನೊಂದು ತೀರಾ ನೀನೊಂದು ತೀರಾ ಎಂದಿದ್ದಾರೆ.

2010ರಲ್ಲಿ ನಡೆದ ಹಿಂದಿಯ ಬಿಗ್ ಬಾಸ್ ಸೀಸನ್ 4ಗೆ ಎಂಟ್ರಿಕೊಟ್ಟಿದ್ದ ಸಾರಾ ಖಾನ್ ಹಾಗೂ ಅಲಿ ಮರ್ಚೆಂಟ್ ಅವರು ಬಿಗ್ ಬಾಸ್ ನಲ್ಲಿ ಪ್ರೀತಿ ಹುಟ್ಟಿ ಅಲ್ಲಿಯೇ ಮದುವೆ ಆಗಿದ್ದರು.  ಅಲ್ಲದೆ ಈ ಜೋಡಿಗಳಿಗೆ ಬಿಗ್ ಬಾಸ್ ನಲ್ಲಿ ಮದುವೆಯಾಗೋಕೆ ಚಾನೆಲ್ ನವರು 50 ಲಕ್ಷ ರೂಪಾಯಿ ನೀಡಿದ್ದರು ಎಂದು ಈ ಜೋಡಿ ಹೇಳಿಕೊಂಡಿತ್ತು. ಆದರೆ ಈ ಜೋಡಿಯ ಹೇಳಿಕೆಯನ್ನ ಚಾನಲ್ ನವರು ಅಲ್ಲಗಳೆದಿದ್ದರು.

ಸಾರಾ ಹಾಗೂ ಅಲಿ ಬಿಗ್ ಬಾಸ್ ಸೀಸನ್ 4ಕ್ಕೆ ಬಂದಿದ್ದರು. ಅಲ್ಲಿಯೇ ಸಾರಾಗೆ ಪ್ರಪೋಸ್ ಮಾಡಿದ್ದ ಅಲಿ ಬಿಗ್ ಬಾಸ್ ಮನೆಯಲ್ಲೇ ವಿವಾಹವಾದರು. ಆದರೆ ಪತಿಯಿಂದ ನಿರಂತವಾಗಿ ಮೋಸಹೋದ ಸಾರಾ ಖಾನ್ ಕೊನೆಗೆ ಪತಿಯಿಂದ ವಿಚ್ಚೇದನ ಪಡೆದು ಹೊರ ಬಂದಿದ್ದಾರೆ.

ಸದ್ಯ ನಟಿ ಕಂಗಾನ ರಣಾವತ್ ನಡೆಸಿಕೊಡುತ್ತಿರುವ ಆಲ್ಟ್​ಬಾಲಾಜಿ ಹಾಗೂ ಎಂಎಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುವ ‘ಲಾಕಪ್​’ ಶೋಗೆ ಸಾರಾ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಸಾರಾ ಅಲಿಯಿಂದ ತಮಗಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ.

‘ಅಲಿ ಯಾವಾಗಲೂ ನನಗೆ ಮೋಸ ಮಾಡಲು ಪ್ರಯತ್ನಿಸುತ್ತಲೇ ಇದ್ದ. ಅದು ನನಗೆ ಕಿರಿಕಿರಿ ಉಂಟು ಮಾಡಿತ್ತು. ನಾನು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇನೆ. ಅವಕಾಶ ಕೊಟ್ಟಾಗಲೆಲ್ಲ ಅವರು ಸಿಕ್ಕಿ ಬಿದ್ದಿದ್ದರು. ಅಲಿ ಹೇಳುತ್ತಿದ್ದ ಪ್ರತಿಯೊಂದು ಸುಳ್ಳನ್ನೂ ನಾನು ಕಂಡು ಹಿಡಿದಿದ್ದೇನೆ. ನಾನು ಅವರಿಗೆ ಕನಿಷ್ಠ 350 ಅವಕಾಶಗಳನ್ನು ನೀಡಿದ್ದೆ. ಏಕೆಂದರೆ ಅವರು ನನಗೆ ಮುಖ್ಯವಾದ ವ್ಯಕ್ತಿ ಆಗಿದ್ದರು. ಆದರೆ, ಮತ್ತೆ ಮೋಸ ಹೋದೆ. ಅಲಿ ಮಾಡಿದ ಮೋಸದಿಂದ ಹೊರಬರಲು, ಎಲ್ಲವನ್ನೂ ಬಿಟ್ಟು ನನ್ನ ಜೀವನದಲ್ಲಿ ಮುಂದೆ ಸಾಗಲು ನಾನು ನಾಲ್ಕೂವರೆ ವರ್ಷಗಳನ್ನು ತೆಗೆದುಕೊಂಡಿದ್ದಾಗಿ ಸಾರಾ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button