Breaking NewsLatestಕೊಡಗುಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ

ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್: 25ಕ್ಕೂ ಅಧಿಕ ಮಂದಿಗೆ ಗಾಯ

ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ಸೊಂದು ಮಡಿಕೇರಿ ಮಂಗಳೂರು ಮಾರ್ಗದ ಸಂಪಾಜೆಯಲ್ಲಿ ಪಯಸ್ವಿನಿ ನದಿಯ ತೋಡಿಗೆ ಬಿದ್ದಿದೆ. ತೋಡಿಗೆ  ಉರುಳಿದ ಕೆಎಸ್ಆರ್ಟಿಸಿ ಬಸ್ನಲ್ಲಿದ್ದ 25ಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ ತರಹದ ಗಾಯಗಳಾಗಿವೆ.

ಈ ಬಸ್ ಧರ್ಮಸ್ಥಳದಿಂದ ಸುಳ್ಯ ಮಾರ್ಗವಾಗಿ ಗುಂಡ್ಲುಪೇಟೆ ಗೆ ತೆರಳುತ್ತಿತ್ತು. ಬಸ್ ಸಂಪಾಜೆ ತಲುಪಿದಾಗ ಪಯಸ್ವಿನಿ ನದಿಯ ತೋಡಿಗೆ ಬಿದ್ದಿದೆ. ಈ ಬಸ್ ಗುಂಡ್ಲುಪೇಟೆ ಡಿಪೊಗೆ ಸೇರಿದೆ. ಸುಬ್ರಮಣ್ಯದಿಂದ ಗುಂಡ್ಲುಪೇಟೆ ಗೆ 27 ಪ್ರಯಾಣಿಕರೊಂದಿಗೆ ಹೊರಟಿತ್ತು. ಅತಿ ವೇಗದಲ್ಲಿದ್ದ ಬಸ್ಸು, ನಿಯಂತ್ರಣ ಸಿಗದೇ ರಸ್ತೆಯ ರಕ್ಷಣಾ ಕಂಬಿಗೆ ತಾಗಿ, ಚಕ್ರ ಒಡೆದು ದುರ್ಘಟನೆ ಸಂಭವಿಸಿದೆ. ಬಸ್ನಲ್ಲಿದ್ದ 27 ಪ್ರಯಾಣಿಕರಿಗೂ ಗಾಯಗಳಾಗಿದ್ದು, ಇಬ್ಬರ ಸ್ದಿತಿ ಚಿಂತಾಜನಕವಾಗಿದೆ. ಸ್ಥಳೀಯ ಸ್ವಯಂಸೇವಕರು ಗಾಯಾಳುಗಳನ್ನು ಅತಿ ಶೀಘ್ರವಾಗಿ ಸುಳ್ಯ ಆಸ್ಪತ್ರೆ ಸಾಗಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button