Breaking NewsLatestಮನರಂಜನೆಸ್ಯಾಂಡಲ್ ವುಡ್

ಮಾ.27ಕ್ಕೆ ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸಿನಿಮಾ ಕೆಜಿಎಫ್ -2 ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಮತ್ತು ಟೀಸರ್ ನಿಂದಲೇ ಕೆಜಿಎಫ್ 2 ಭಾರಿ ಸದ್ದು ಮಾಡುತ್ತಿದೆ. ಹೀಗಾಗಿ ಯಶ್ ಅಭಿಮಾನಿಗಳು ಸೇರಿದಂತೆ ಕನ್ನಡ ಸಿನಿ ಪ್ರಿಯರು ಸಿನಿಮಾ ನೋಡುವುದಕ್ಕಾಗಿ ಕಾದು ಕುಳಿತಿದ್ದಾರೆ. ಈಗ ಚಿತ್ರದ ಟ್ರೈಲರ್ ಕುರಿತು ಕಾತುರ ಹೆಚ್ಚಾಗಿದೆ. ಅಂದಾಗೆ ಈ ಚಿತ್ರದ ಟ್ರೈಲರ್ ಇದೇ ತಿಂಗಳ 27ಕ್ಕೆ ಬಿಡುಗಡೆಯಾಗಲಿದೆ.

ಚಿತ್ರತಂಡದಿಂದ ಟ್ರೈಲರ್ ಬಿಡುಗಡೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಅದು ಏನಾಪ್ಪ ಅಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೆಜಿಎಫ್ 2 ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಂದಿದ್ದು, ಶಿವಣ್ಣ ಅವರಿಂದ ಟ್ರೈಲರ್ ಬಿಡುಗಡೆಯಾಗುತ್ತಿರುವುದಕ್ಕೂ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇತ್ತೀಚೆಗೆ ಈ ಸಿನಿಮಾದ ತೂಫಾನ್ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಈ ಚಿತ್ರದಲ್ಲಿ ಅಧೀರ ಎಂಬ ಪಾತ್ರಕ್ಕೆ ಸಂಜಯ್ ದತ್ ಬಣ್ಣ ಹಚ್ಚಿದ್ದರೆ, ರಮಿಕಾ ಸೇನ್ ಎಂಬ ಪವರ್ಫುಲ್ ಮಹಿಳೆಯ ಪಾತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದಾರೆ. ಹೀಗಾಗಿಕೆಜಿಎಫ್ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button