Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾಲ್ ತೆರೆಯಲು‌ ಸಕಲ ಸಿದ್ಧತೆ

ಧಾರವಾಡ: ಕಳೆದ ಎರಡು ತಿಂಗಳಿಂದ ಕೊರೊನಾ ಮಾಹಾಮಾರಿ ಎರಡನೇ ಅಲೆಯಿಂದ ಸಂಪೂರ್ಣ ಲಾಕ್ ಆಗಿದ ವಾಣಿಜ್ಯ ನಗರಿ ಹುಬ್ಬಳ್ಳಿಯ ಮಾಲ್‌ಗಳು, ಈಗ ವ್ಯಾಪಾರ ವಹಿವಾಟು ನಡೆಸಲು ಸಕಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಈಗಾಗಲೇ ರಾಜ್ಯ ಸರ್ಕಾರ 3.0 ಅನ್ ಲಾಕ್ ಪ್ರಕ್ರಿಯೆಯನ್ನು ಪ್ರಕಟಿಸಿದ್ದು, ಸೋಮಾವಾರ ಅಂದರೆ ಜುಲೈ 5 ರಿಂದ ಮಾಲ್‌ಗಳಿಗೂ ವ್ಯಾಪಾರ ವಹಿವಾಟು ನಡೆಸಲು ಷರತ್ತುಬದ್ಧ ಅನುಮತಿ ನೀಡಿದೆ.

ನಾಳೆಯಿಂದಲ್ಲೇ ಮಾಲ್‌ಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ, ಗೋಕುಲ್ ರಸ್ತೆಯ ಓರಾಯನ್ ಮಾಲ್, ಅರ್ಬನ್ ಓಯಸಿಸ್ ಮಾಲ್, ಹಾಗೂ ಮಾರುಕಟ್ಟೆಯಲ್ಲಿನ ಯು ಮಾಲ್, ಲಕ್ಷ್ಮಿ ಮಾಲ್ ಸೇರಿದಂತೆ ಬಹುತೇಕ ಮಾಲ್‌ಗಳಲ್ಲಿ, ಈಗ ಸ್ವಚ್ಚತೆ ಕಾರ್ಯ ಹಾಗೂ ಮಳಿಗೆಯಲ್ಲಿರುವ ಮಾರಾಟ ವಸ್ತುಗಳ ಸಾಮಾಗ್ರಿಗಳನ್ನು ಸ್ವಚ್ಚ ಮಾಡಿಕೊಳ್ಳಳ್ಳುವ ಮೂಲಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ರಾತ್ರಿ 9 ಗಂಟೆಯಿಂದ ಮುಂಜಾನೇ ಐದು ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, 9 ಗಂಟೆಯವರೆಗೆ ಮಾಲ್ ಸೇರಿದಂತೆ ಇನ್ನಿತರ ಕಡೆಗಳ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದ್ದು, ಕೊರೊನಾ ಮಾರ್ಗ ಸೂಚಿಗಳೊಂದಿಗೆ ಮಾಲ್‌ಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿ ಕೋಡಲಾಗಿದೆ. ಹಾಗಾಗಿ ಈಗ ಮಳಿಗೆಯ ಮಾಲೀಕರು ತಮ್ಮ ತಮ್ಮ ಅಂಗಡಿಗಳಲ್ಲಿ ಸ್ವಚ್ಚತೆಯ ಜೊತೆಗೆ ವ್ಯಾಪಾರವಾಗದೇ ಹಾಗೇ ಉಳಿದ ಮಾರಾಟ ವಸ್ತುಗಳ ಸ್ವಚ್ಚತೆಯಲ್ಲಿ ಇಂದು ಪುಲ್ ಬ್ಯೂಸಿಯಾಗಿದ್ದಾರೆ.

ಇನ್ನೂ ನಾಳೆಯಿಂದ ಮಾಲ್‌ಗಳ ಕಾರ್ಯಚಟುವಟಿಕೆಗಳು ಆರಂಭವಾಗಕಲಿದ್ದು, ಕಳೆದ ಎರಡು ತಿಳಗಳಿಂದ ಮಾಲ್ ಶಾಪಿಂಗ್ ಇಲ್ಲದೆ ಬೇಜಾರಾಗಿದ್ದ ವಾಣಿಜ್ಯ ನಗರಿ ಜನತೆ ಮಾಲ್‌ಗಳಲ್ಲಿ ತಮ್ಮಗೆ ಬೇಕಾದ ವಸ್ತಗಳ ಖರೀದಿಯಲ್ಲಿ ತೋಡಗಬಹುದಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button