Breaking NewsLatestರಾಜ್ಯಸುದ್ದಿ

ಮತ್ತೊಂದು ದಾಖಲೆ ಬರೆದ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ.

ಈಗಾಗಲೇ ಕಲೆಕ್ಷನ್ ನಲ್ಲಿ ಕೆಜಿಎಫ್ ಮೊದಲನೆಯ ಭಾಗವನ್ನು ಇಂದಿಕ್ಕಿದ್ದು,ಕಾಂತಾರ ಚಿತ್ರ ಇದೀಗ 300 ಕೋಟಿ ₹ ಗಳಿಕೆ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ.

ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ಎರಡನೇ ಸಿನಿಮಾ ಇದಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸಾಕಷ್ಟು ಸಿನಿಮಾ ಕಲಾವಿದರು ಈ ಚಿತ್ರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಎಲ್ಲಾ ಭಾಷೆಯ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಪ್ರಕಾಶ್, ಸ್ವರಾಜ್ ಶೆಟ್ಟಿ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button