Breaking NewsLatestಆರೋಗ್ಯಮೆಟ್ರೋಸುದ್ದಿಸ್ಪೆಷಲ್ ಸ್ಟೋರೀಸ್

ಜಗತ್ತನ್ನು ಕಾಡುತ್ತಿರುವ ಕೊರೋನಾ ಇನ್ನೆಷ್ಟು ಕಾಲ ಕಾಡಲಿದೆ…?

How Long Corona? ನವದೆಹಲಿ: ಕೊರೋನಾದಿಂದ ಜಗತ್ತಿಗೆ ಮುಕ್ತಿ ಇಲ್ಲವೇ ? ಎಂಬ ಪ್ರಶ್ನೆ ಮನುಕುಲವನ್ನು ಕಾಡುತ್ತಿದೆ. ಇದರ ಜೊತೆಗೆ ವೈದ್ಯರು ಮತ್ತು ಆರೋಗ್ಯ ವಲಯದ ಪಂಡಿತರು ಹೇಳುತ್ತಿರುವ ಮತ್ತೊಂದು ಮಾತೆಂದರೆ ಇನ್ನು ಮುಂದೆ ಕೊರೋನಾ ಜೊತೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು ಅದು ಹೋಗುವುದಿಲ್ಲ, ನಮ್ಮೊಂದಿಗೆ ಇರುತ್ತದೆ ಮಲೇರಿಯಾ, ಕ್ಷಯ, ಪೋಲಿಯೋ ಇರುವಂತೆ ಮುಂದೆ ಕೂಡ ಕೊರೋನಾ ಇರುತ್ತದೆ ಎಂಬ ಮಾತೂ ಕೂಡ ಕೇಳಿಬರುತ್ತಿದೆ.

ಈಗ ಯಾವುದನ್ನು ನಂಬುವುದು ಕೊರೋನ ಶಾಶ್ವತವಾಗಿ ಮುಂದೆ ಇರುತ್ತದೆಯೇ ಇಲ್ಲ ಹೋಗುತ್ತದೆಯೇ ? ಆದರೆ ಅಮೆರಿಕಾ ವೈರಾಣು ತಜ್ಞ ಕುಟುಬ್ ಮಹಮ್ಮದ್ ಅವರ ಪ್ರಕಾರ ಕೊರೋನಾ ಆಟ ಬಹಳ ಕಾಲ ನಡೆಯುವುದಿಲ್ಲ ಸದ್ಯದಲ್ಲೇ ಅದರ ಆಟ ಕೊನೆಯಾಗಲಿದೆ. ವೈರಸ್ ವಿರುದ್ಧ ಅಂತಿಮವಾಗಿ ಮನುಕುಲಕ್ಕೆ ಜಯವಾಗಲಿದೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ವೈರಾಣು ರೂಪಾಂತರ ಹೊಂದಿ ಜನರನ್ನು ಹೆದರಿಸುತ್ತಿದೆ ನಿಜ. ಆದರೆ ಅದಕ್ಕೆ ತಕ್ಕಂತೆ ಜನರು ಕೂಡ ಅದನ್ನು ಪ್ರತಿರೋಧಿಸುವ ಶಕ್ತಿಯನ್ನು ಆಧುನಿಕ ವೈದ್ಯಕೀಯ ವಿಧಾನಗಳ ಮೂಲಕ ರೂಢಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವೈರಾಣು ಮತ್ತು ಮನುಕುಲದ ಕಾದಾಟದಲ್ಲಿ ಅಂತಿಮವಾಗಿ ಮನುಕುಲಕ್ಕೆ ಜಯವಾಗಲಿದೆ.
ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ವೈರಾಣು ವಿರುದ್ದ ಹೋರಾಟ ನಡೆಸಲು ನಾವು ಲಸಿಕೆ ಕಂಡುಹಿಡಿದಿದ್ದೇವೆ, ಮಾತ್ರೆಗಳನ್ನು ಉಪಯೋಗಿಸುತ್ತಿದ್ದೇವೆ. ಹೀಗಾಗಿ ನಮ್ಮ ಸಮರ ಮುಂದುವರೆದಿದ್ದು ಕಡೆಗೆ ವೈರಾಣುವಿಗೆ ಅಂತಿಮವಾಗಿ ಸೋಲು ಉಂಟಾಗಲಿದೆ. ಜಗತ್ತಿನ ಬಳಿ ವೈರಾಣು ಸೋಲಿಸಲು ಅನೇಕ ಅಸ್ತ್ರಗಳು ಸಿದ್ಧವಿರುವುವದರಿಂದ ವೈರಾಣು ಆಟ ಮುಂದೆ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ.


ಭಾರತ ಕೇವಲ ಒಂದು ವರ್ಷದ ಒಳಗೆ ದೇಶದ ಶೇಕಡ 60ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದು ನಿಜಕ್ಕೂ ದೊಡ್ಡ ಸಾಧನೆ ಎಂದು ಅಮೆರಿಕ ವೈರಾಣು ತಜ್ಞ ಭಾರತದ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಭಾರತೀಯ ಲಸಿಕಾ ತಯಾರಕರು ಮತ್ತು ಆರೋಗ್ಯ ಕಾರ್ಯಕರ್ತರು ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದೂ ಮೆಚ್ಚುಗೆ ಮಾತು ಸಹ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button