Breaking NewsLatestಮೆಟ್ರೋಸುದ್ದಿ
ಸಚಿವ ಸೋಮಣ್ಣರಿಂದ ಯಲಹಂಕ ವಸತಿ ಸಮುಚ್ಚಾಯ ಪರಿಶೀಲನೆ

ಬೆಂಗಳೂರು: ಯಲಹಂಕದ ಸಾದೇನಹಳ್ಳಿಯಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ವಸತಿ ಕಾಮಗಾರಿಯನ್ನು ವಸತಿ ಸಚಿವ ವಿ.ಸೋಮಣ್ಣ ಬುಧವಾರ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ್.10 ರಂದು ವಸತಿ ಸಮುಚ್ಚಯವನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದರು. ಇದೇ ವೇಳೆ, ವಸತಿ ಸಮುಚ್ಚಯದ ಫಲಾನುಭವಿಗಳ ಹಂಚಿಕೆ ಪಟ್ಟಿ ಮತ್ತು ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಮತ್ತಿತರರು ಇದ್ದರು
