Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜ್ಯಸುದ್ದಿ
ಹಿಜಾಬ್ ವಿವಾದ: ಸರ್ಕಾರದಿಂದ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಕೆ

ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಶಾಲೆ-ಕಾಲೇಜುಗಳಲ್ಲಿ ಸರ್ಕಾರ ಈಗಾಗಲೇ ವಸ್ತ್ರಸಂಹಿತೆ ಜಾರಿಗೊಳಿಸಿದೆ. ಧಾರ್ಮಿಕ ಸಂಕೇತದ ವಸ್ತ್ರಕ್ಕೆ ಅವಕಾಶ ಇಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಸರ್ಕಾರ ಯಾವುದೇ ಧರ್ಮ, ಸಮುದಾಯದ ಪರವಾಗಿಲ್ಲ. ಶಾಲೆ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ವಸ್ತ್ರಕ್ಕೆ ಅವಕಾಶ ಇಲ್ಲ. ಸಮವಸ್ತ್ರನೀತಿಯಿಂದ ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿಲ್ಲ. ವಿದ್ಯಾರ್ಥಿಗಳು ಹಿಜಾಬ್ ಧಾರಣೆಯಿಂದ ಸಮವಸ್ತ್ರ ನೀತಿ ಉಲ್ಲಂಘನೆಯಾಗಿದೆ. ಕೆಲವರಿಗೆ ವಿನಾಯಿತಿ ನೀಡಿದರೆ ಉಳಿದವರು ಕೇಳುತ್ತಾರೆ ಎಂದೂ ಅದು ಹೇಳಿದೆ.
ಶಾಲೆ-ಕಾಲೇಜುಗಳು ಯಾವುದೇ ಧರ್ಮದ ಆಶ್ರಯ ಕೇಂದ್ರಗಳಲ್ಲ. ವಿದೇಶಗಳಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಹಲವು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಜಾಬ್ ನಿಷೇಧಿಸಲಾಗಿದೆ. ಕೆಲವರಿಗೆ ವಿನಾಯಿತಿ ನೀಡಿದರೆ ಉಳಿದವರು ಕೇಳುತ್ತಾರೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
