Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿರಾಜ್ಯಸುದ್ದಿ

ಹೆದ್ದಾರಿ ಅಭಿವೃದ್ದಿ: ಕೆರೆ ಜಾಗ ಒತ್ತುವರಿ!

ಚಿಕ್ಕಮಗಳೂರು: ನಗರದ ದಂಟರಮಕ್ಕಿ ಕೆರೆ ಅಥವಾ ಬಸವನಹಳ್ಳಿ ಕೆರೆ ಅಂತ ಕರೆಸಿಕೊಳ್ಳುವ ಪ್ರದೇಶದ ಒತ್ತುವರಿ ಇದೀಗ ಬರೆಯಾಗಿ ಪರಿಣಮಿಸಿದೆ. ಕೆರೆಯ ಏರಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌–173) ಅಭಿವೃದ್ಧಿಗೆ ಕೆರೆ ಜಾಗವನ್ನ ಆಕ್ರಮಿಸಲಾಗಿದೆ. ಈ ಕೆರೆ ಪ್ರದೇಶದಲ್ಲಿ ರಸ್ತೆ ವಿಸ್ತರಣೆ, ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಕೆರೆ ಪ್ರದೇಶ ಸುತ್ತಲೂ ಒತ್ತುವರಿಯಾಗಿದೆ ಎಂಬ ದೂರುಗಳು ಇವೆ.

ಈ ಕೆರೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಕೆರೆಯ ವಿಸ್ತೀರ್ಣ 47.75 ಹೆಕ್ಟೇರ್‌, ನೀರು ಸಂಗ್ರಹಣಾ ಸಾಮರ್ಥ್ಯ 49.92 ಮೆಟ್ರಿಕ್‌ ಅಡಿಯಾಗಿದ್ದು ಕೆರೆಯಲ್ಲಿದ್ದ ನೀರನ್ನು ಪೂರ್ತಿ ಖಾಲಿ ಮಾಡಲಾಗಿದೆ. ಅಂಗಳದ ಹೂಳು ತೆಗೆದು ಸಾಗಿಸಲಾಗುತ್ತಿದೆ. ರಸ್ತೆ ವಿಸ್ತರಿಸುವಷ್ಟು ಜಾಗಕ್ಕೆ ಮಣ್ಣು ತುಂಬಿಸಿ, ಸಮತಟ್ಟುಗೊಳಿಸುವ ಕೆಲಸ ಬಹುತೇಕ ಮುಗಿದಿದೆ. ಒಟ್ಟು ರಸ್ತೆ ಮಧ್ಯದಿಂದ 16 ಮೀಟರ್‌ ವಿಸ್ತರಣೆ ಮಾಡಿದ್ದೇವೆ. ಕೆರೆ ಪ್ರದೇಶದ ಸ್ವಲ್ಪ ಜಾಗವು ಅದರಲ್ಲಿ ಸೇರಿದೆ’ ಎಂದು ಕಾಮಗಾರಿ ಗುತ್ತಿಗೆದಾರರ ಕಡೆಯ ಎಂಜಿನಿಯರ್‌ ಸೂರ್ಯತೇಜ ತಿಳಿಸಿದರು. ಒಟ್ನಲ್ಲಿ ಈಗಾಗಲೇ ಕೆರೆಗಳು ನಶಿಸಿ ಹೋಗುತ್ತಿವೆ. ಇದೀಗ ಅಭಿವೃದ್ದಿ ಹೆಸ್ರಲ್ಲಿ ದಂಟರಮಕ್ಕಿ ಕೆರೆಯ ನಾಶದ ಕಾರ್ಯ ನೆಡೆಯುತ್ತಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಕ್ರಮಕೈಗೊಳ್ತಾರಾ ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button