Breaking NewsLatestಆರೋಗ್ಯಲೈಫ್ ಸ್ಟೈಲ್

ಮಿಲನವಾದ ನಂತರ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಕೆಲ ಟಿಪ್ಸ್ ಗಳು

ಮದುವೆಯ ನಂತರ ಮಹಿಳೆಯ ಜೀವನವೇ ಬದಲಾಗುತ್ತದೆ. ಸಂಗಾತಿಗಳಿಬ್ಬರು ಪರಸ್ಪರ ಪ್ರೀತಿಯ ಒಳಗಡೆ ಬಿದ್ದಿರುತ್ತಾರೆ. ಇನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಪ್ರಪಂಚವನ್ನೇ ಮರೆತು ಬಿಡುತ್ತಾರೆ. ಲೈಂಗಿಕ ತೃಪ್ತಿ ಕಂಡುಕೊಳ್ಳುವುದಷ್ಟೇ ಇಬ್ಬರ ಗುರಿಯಾಗಿರುತ್ತದೆ. ಆದರೆ ಆನಂತರದಲ್ಲಿ ತಮ್ಮ ಬಗ್ಗೆ ತಾವು ಆಲೋಚನೆ ಮಾಡಿಕೊಳ್ಳುವುದು ಒಳ್ಳೆಯದು. ತಮ್ಮ ಜನನಾಂಗದ ಭಾಗದ ಸ್ವಚ್ಛತೆಯ ಕಡೆಗೆ ಗಮನ ಕೊಡಬೇಕಾದ ಅನಿವಾರ್ಯತೆ ಇಬ್ಬರಿಗೂ ಇರುತ್ತದೆ. ಒಂದು ವೇಳೆ ಹೀಗೆ ಮಾಡದೆ ಬಿಟ್ಟರೆ ಏನಾಗಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.
ಯೋನಿಯ ಭಾಗವನ್ನು ಬಟ್ಟೆಯಿಂದ ಒರೆಸಿಕೊಳ್ಳಿ
ಸಂಗಾತಿಯ ಲೈಂಗಿಕ ಪ್ರಕ್ರಿಯೆ ಸಂಪೂರ್ಣವಾದ ನಂತರ ನಿಮ್ಮ ಇಡೀ ದೇಹ ಬೆವರಿನಿಂದ ತುಂಬಿರುತ್ತದೆ. ನಿಮ್ಮ ಯೋನಿಯ ಭಾಗ ಕೂಡ ನಿಮ್ಮ ಸಂಗಾತಿಯ ವೀರ್ಯ ಹಾಗೂ ಬೆವರಿನಿಂದ ಆವೃತವಾಗಿರುತ್ತದೆ. ಬ್ಯಾಕ್ಟೀರಿಯಗಳ ಸೋಂಕು ತಗಲುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಒಂದು ಒಣ ಬಟ್ಟೆಯಿಂದ ಅಥವಾ ಟಿಶ್ಯೂ ಪೇಪರ್ ಮೂಲಕ ನಿಮ್ಮ ಯೋನಿಯ ಭಾಗವನ್ನು ಸ್ವಚ್ಛ ಪಡಿಸಿಕೊಳ್ಳಿ.

ಯೋನಿಯ ಸ್ವಚ್ಛತೆ ಕಾಪಾಡಿಕೊಳ್ಳಿ
ಮಹಿಳೆಯರು ಬೇರೆ ಯಾವುದೇ ಸಂದರ್ಭದಲ್ಲಿಯೂ ಕೂಡ ತಮ್ಮ ಯೋನಿಯ ಭಾಗದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ತಮ್ಮ ಯೋನಿಯ ಭಾಗದಲ್ಲಿ ಪಿಹೆಚ್ ಮಟ್ಟ ಸಮತೋಲನ ತಪ್ಪದಂತೆ ನೋಡಿಕೊಳ್ಳುವ ಜೊತೆಗೆ, ಯೋನಿಯ ಒಣಗುವಿಕೆ ಇರುವಂತೆ ಸಂದರ್ಭವನ್ನು ಕಾಯ್ದುಕೊಳ್ಳಬೇಕು. ಇದರಿಂದ ಲೈಂಗಿಕವಾಗಿ ಹರಡಬಹುದಾದ ಬಹುತೇಕ ಕಾಯಿಲೆಗಳನ್ನು ಹಾಗೂ ಬ್ಯಾಕ್ಟೀರಿಯಾ ಜೊತೆಗೆ ಫಂಗಲ್ ಸೋಂಕುಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ರೆಸ್ಟ್ ರೂಮ್ ಉಪಯೋಗಿಸಿ
ಲೈಂಗಿಕ ಪ್ರಕ್ರಿಯೆ ಮುಗಿದ ಬಳಿಕ ಸಾಕಷ್ಟು ಮಹಿಳೆಯರು ಮೂತ್ರ ವಿಸರ್ಜನೆ ಮಾಡಲು ಮುಂದಾಗುತ್ತಾರೆ. ವೈಜ್ಞಾನಿಕವಾಗಿ ಈ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಪುರುಷರ ಶಿಶ್ನದ ಭಾಗದ ಬ್ಯಾಕ್ಟೀರಿಯಗಳು ಒಂದು ವೇಳೆ ಯೋನಿಯ ಒಳಭಾಗಕ್ಕೆ ತಲುಪಿದ್ದರೆ, ಅವುಗಳು ಸ್ವಚ್ಛವಾಗಿ ಸಂಪೂರ್ಣವಾಗಿ ಹೊರಗೆ ಬರುವಂತೆ ಆಗುತ್ತದೆ.

ಹೆಚ್ಚು ನೀರು ಕುಡಿಯಿರಿ
ದೇಹಕ್ಕೆ ಯಾವುದೇ ಕಾರಣಕ್ಕೂ ನಿರ್ಜಲೀಕರಣ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಯರ ಹಾಗೂ ಪುರುಷರು ದೇಹದಿಂದ ಸಾಕಷ್ಟು ಬೆವರು ಹರಿದು ಹೋಗಿರುತ್ತದೆ. ಈ ರೀತಿ ಮಾಡುವುದರಿಂದ ಗುಪ್ತಾಂಗದ ಆರೋಗ್ಯ ಕಾಪಾಡಿಕೊಳ್ಳಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button