ಕಬಿನಿಯಲ್ಲಿ ಒಳ ಹರಿವು ಹೆಚ್ಚಳ : ಮೈದುಂಬಿ ಹರಿಯುತ್ತಿದೆ ಕಪಿಲಾ ನದಿ

ಮೈಸೂರು : ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಜಲಾಶಯದಿಂದ ಹೆಚ್ಚಿನ ನೀರನ್ನು ನಂಜನಗೂಡಿನ ಕಪಿಲಾ ನದಿಗೆ ಬಿಟ್ಟ ಕಾರಣದಿಂದ ಕಪಿಲೆ ಮೈದುಂಬಿ ಹರಿಯುತ್ತಿದೆ.
ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ನೀರಿನ ಪ್ರಮಾಣ ಹೆಚ್ಚಾಗಿದೆ ಆದ್ದರಿಂದ ಜಲಾಶಯದ ಹಿತದೃಷ್ಟಿಯಿಂದ ಹೆಚ್ಚಿನ ನೀರನ್ನು ಕಪಿಲಾ ನದಿಗೆ ಬಿಟ್ಟಿದ್ದರಿಂದ ತೀರದ ಶ್ರೀಕಂಠಸ್ವಾಮಿ ಸ್ಥಾನದ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಜೊತೆಗೆ ಹದಿನಾರು ಕಾಲು ಮಂಟಪದ ಮೇಲ್ಭಾಗದವರೆಗೂ ನೀರು ತುಂಬಿದೆ. ಆದ್ದರಿಂದ ಭಕ್ತಾದಿಗಳಿಗೆ ಕಪಿಲಾ ನದಿಯಲ್ಲಿ ಸ್ನಾನ ಮಾಡಲು ಇಂದು ಬಿಡಲಿಲ್ಲ ನದಿಯ ಹತ್ತಿರ ಪೊಲೀಸ್ ಮತ್ತು ದೇವಸ್ಥಾನದ ಸೆಕ್ಯೂರಿಟಿಗಳನ್ನು ಹಾಕಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.
ನದಿಯಿಂದ ನೀರು ಹೆಚ್ಚಾಗುತ್ತಿರುವುದರಿಂದ ನದಿ ಪಾತ್ರದ ಜನತೆಗೆ ಅಂದರೆ ಹಳ್ಳದಕೇರಿ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ಕುರುಬಗೇರಿ ಬಡಾವಣೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳ ಕಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಗುರು ಪೂರ್ಣಿಮೆ ಆದ್ದರಿಂದ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಇಂದಿನ ದಿಂದಲೇ ಮುಡಿ ಸೇವೆಯನ್ನು ರದ್ದುಪಡಿಸಲಾಗಿದೆ ಆದರೂ ಕೂಡ ಇಂದು ಮುಡಿ ಕೊಡಲು ಭಕ್ತಾದಿಗಳು ಪರದಾಡುವ ಸ್ಥಿತಿ ಕಂಡುಬಂತು ಸ್ನಾನ ಮಾಡಲು ನದಿಗೆ ಬಿಡದ ಕಾರಣ ಭಕ್ತಾದಿಗಳು ದೇವಸ್ಥಾನದ ಪಕ್ಕದಲ್ಲಿರುವ ನಲ್ಲಿಗಳಿಗೆ ಮೊರೆಹೋಗಿ ಸ್ನಾನ ಮಾಡಿಕೊಂಡು ದೇವಸ್ಥಾನಕ್ಕೆ ತೆರಳಿದ್ದರು.
ಆದರೆ ಭಕ್ತಾದಿಗಳು ಸೇತುವೆ ಬಳಸಿಕೊಂಡು ಹೋಗಿ ಹೆಜ್ಜಿಗೆ ಗ್ರಾಮದ ಬಳಿ ಹೋಗಿ ಸ್ಥಾನ ಮಾಡುವುದು ಕಂಡುಬಂತು. ಒಟ್ಟಿನಲ್ಲಿ ಇಂದು ಸ್ಥಾನ ಮಾಡಲು ಮುಡಿ ಕೊಡಲು ಭಕ್ತಾದಿಗಳಿಗೆ ಬಹಳ ತೊಂದರೆ ಉಂಟಾಯಿತು ತಾಲೂಕು ಆಡಳಿತ ನದಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಿತ್ತು.
