Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ರಷ್ಯಾ ವಿಮಾನಯಾನ ಸಂಸ್ಥೆಗಳಿಗೆ ನಿರ್ಬಂಧ ಹೇರಲು ಯುರೋಪ್, ಕೆನಡಾ ನಿರ್ಧಾರ

ನವದೆಹಲಿ: ಯುರೋಪ್ ಮತ್ತು ಕೆನಡಾ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾದ ವಿಮಾನಯಾನ ಸಂಸ್ಥೆಗಳಿಗೆ ತಮ್ಮ ವಾಯುಪ್ರದೇಶವನ್ನು ಮುಚ್ಚುವುದಾಗಿ ಹೇಳಿವೆ. ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರೆ ಲೇಯೆನ್ ಅವರು ಖಾಸಗಿ ಜೆಟ್ ಗಳು ಸೇರಿದಂತೆ ರಷ್ಯನ್ನರ ಒಡೆತನದ, ನೋಂದಾಯಿಸಿದ ಅಥವಾ ನಿಯಂತ್ರಿಸುವ ವಿಮಾನಗಳಿಗಾಗಿ ಯುರೋಪಿಯನ್ ಯೂನಿಯನ್ ತನ್ನ ವಾಯು ಪ್ರದೇಶವನ್ನು ಮುಚ್ಚುತ್ತದೆ ಎಂದು ಹೇಳಿದರು.

ಕೆನಡಾದ ಸಾರಿಗೆ ಸಚಿವ ಒಮರ್ ಅಲ್ಗಾಬ್ರಾ, ತನ್ನ ನೆರೆಹೊರೆಯ ಮೇಲೆ ಅಪ್ರಚೋದಿತ ದಾಳಿಗೆ ದೇಶವನ್ನು ಹೊಣೆಗಾರರನ್ನಾಗಿಸಲು ತನ್ನ ರಾಷ್ಟ್ರ, ಎಲ್ಲಾ ರಷ್ಯಾದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುತ್ತಿದೆ ಎಂದರು.

ಯುರೋಪಿಯನ್ ಯೂನಿಯನ್ ಕ್ರಮವು ಅದರ ಸದಸ್ಯ ರಾಷ್ಟ್ರಗಳು ರಷ್ಯಾದ ವಿಮಾನಗಳನ್ನು ನಿರ್ಬಂಧಿಸುವುದಾಗಿ ಹೇಳಿದ ನಂತರ ಅಥವಾ ಶೀಘ್ರವೇ ಹಾಗೆ ಮಾಡಲು ಯೋಜಿಸಿಲಾಗಿದೆ. ಈ ನಡುವೆ ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ, ಯುರೋಪಿಯನ್ ಆಕಾಶ ಜನರನ್ನು ಸಂಪರ್ಕಿಸುವವರಿಗೆ ಮುಕ್ತವಾಗಿದೆ ಆದರೆ ಕ್ರೂರವಾಗಿ ಆಕ್ರಮಣ ಮಾಡಲು ಬಯಸುವವರಿಗೆ ಅಲ್ಲ ಎಂದಿದ್ದಾರೆ.  

ಯುದ್ಧ ಅಂತ್ಯಗೊಳಿಸಲು ಒತ್ತಾಯ

ಈ ನಡುವೆ ಯುದ್ಧ-ವಿರೋಧಿ ಪ್ರತಿಭಟನಾಕಾರರು ಬರ್ಲಿನ್, ರೋಮ್, ಪ್ರೇಗ್ ಇಸ್ತಾನ್ ಬುಲ್ ಮತ್ತು ಇತರ ನಗರಗಳಲ್ಲಿ ಬೀದಿಗಿಳಿದರು. ರಷ್ಯಾದ ನಗರಗಳಾದ ಮಾಸ್ಕೋ ಮತ್ತು ಸೆಂಟ್ ಪೀಟರ್ಸ್ ಬರ್ಗ್ ಮತ್ತು ಬೆಲರೂಸಿಯನ್ ನಗರಗಳಲ್ಲಿ ಯುದ್ಧ ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ.

ದೇಶದ ಪ್ರಮುಖ ಮಾನವ ಹಕ್ಕುಗಳ ಗುಂಪಿನ ಪ್ರಕಾರ, ರಷ್ಯಾದ ಆಕ್ರಮಣದ ವಿರುದ್ಧ ಪ್ರತಿಭಟಿಸಿದ 500ಕ್ಕೂ ಹೆಚ್ಚು ಜನರನ್ನು ಬೆಲಾರಸ್ ನಲ್ಲಿ ಬಂಧಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button