ಬಾರ್ಮರ್ ಹೆದ್ದಾರಿಯಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದ ಸುಖೋಯ್ ಸಿ-30 ಎಂಕೆಐ ಫೈಟರ್ ಜೆಟ್

ನವದೆಹಲಿ : ಭಾರತೀಯ ವಾಯುಪಡೆಯ ನ ಪ್ರಮುಖ ಯುದ್ಧ ವಿಮಾನ ಸುಖೋಯ್ ಸು-30 ಎಂಕೆಐ ಫೈಟರ್ ಜೆಟ್ ಭಾರತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲ ಬಾರಿಗೆ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದೆ. ಇಂದು ರಾಜಸ್ಥಾನದ ಜಲೋರ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸಾಧನೆ ಮಾಡಲಾಗಿದೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರು ರಾಜಸ್ಥಾನದ ಬಾರ್ಮರ್ ನ ಸಟ್ಟಾ-ಗಾಂಧವ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿ (nh) 925ಎ ನಲ್ಲಿ ತುರ್ತು ಸೌಲಭ್ಯವನ್ನು ಉದ್ಘಾಟಿಸಿದರು.
ಕೇವಲ ಸುಖೋಯ್ ಫೈಟರ್ ಜೆಟ್ ಮಾತ್ರವಲ್ಲ, ಐಎಎಫ್ ಸಿ-130ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನವನ್ನು ಜಲೋರ್ ನ ತುರ್ತು ಲ್ಯಾಂಡಿಂಗ್ ಫೀಲ್ಡ್ ನಲ್ಲಿ ಇಳಿಸಿತು. ಸಾರಿಗೆ ವಿಮಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್.ಭದೌರಿಯಾ ಪ್ರಯಾಣಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಟ್ಟಾ-ಗಾಂಧವ್ ವಿಭಾಗದ 3 ಕಿಲೋಮೀಟರ್ ವಿಸ್ತಾರವನ್ನು ಅಭಿವೃದ್ಧಿಪಡಿಸಿದೆ, ಇದನ್ನು ಐಎಎಫ್ ತುರ್ತು ಸೌಲಭ್ಯವಾಗಿ ಬಳಸಲು ಉಪಯೋಗಿಸಲಾಗುತ್ತದೆ.
