Breaking NewsLatestಮೆಟ್ರೋರಾಜ್ಯಸುದ್ದಿ
ಬೆಂಗಳೂರಿನ ಕೆಲ ಕಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ಬೇಸಿಗೆ ಕಾಲ ಬಂತು ಅಂದರೆ ಸಾಕು ಸಿಟಿ ಜನರಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತವೆ. ಬೆಂಗಳೂರಿನಲ್ಲಿ ಹಲವು ಕಡೆ ಕಾಮಗಾರಿ ನಡೆಯುತ್ತಿದ್ದು, ಸಾಕಷ್ಟು ಕಡೆ ವಿದ್ಯುತ್ ಕಡಿತವಾಗಲಿದೆ. ಬಿಸಿಲಿನ ತಾಪದಿಂದ ಬೇಸತ್ತ ಜನರು ಕರೆಂಟ್ ಇಲ್ಲದೆ ಹೈರಾಣಾಗಿದ್ದಾರೆ.
ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆಯಿಂದ ಜನರು ಗೋಳಾಡುವಂತಾಗಿದೆ. ನಗರದಲ್ಲಿ ಇಂದು ಮತ್ತೆ ನಾಳೆ ಕೆಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು
ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ನೀಲಗಿರಿ ಥಾಪ್ ರಸ್ತೆ J.C. ಇಂಡಸ್ಟ್ರಿಯಲ್ ಲೇಔಟ್
ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ 1ನೇ ಕ್ರಾಸ್, 2ನೇ ಕ್ರಾಸ್, ಪೀಣ್ಯ ಸೇರಿದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.
