Breaking NewsLatestಕ್ರೈಂಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ಬೀಗ ಹಾಕಿದ ಮನೆಗಳೇ ಈತನ ಟಾರ್ಗೇಟ್: ಕೊನೆಗೂ ಸಿಕ್ಕಿಬಿದ್ದ ಚಾಲಾಕಿ ಕಳ್ಳ

ಧಾರವಾಡ: ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮನೆಗಳಿಗೆ ಕನ್ನ ಹಾಕ್ತಿದ್ದ ಖದಿಮನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಗವಿಸಿದ್ದಪ್ಪ ಗಣಕೇರಿ ಬಂಧಿತ ಆರೋಪಿ. ಚಾಲುಕ್ಯ ನಗರದ ವಿನಯ ಪಾಟೀಲ್ ಎಂಬುವವರ ಮನೆಯಲ್ಲಿ ಬೀಗ ಮುರಿದು ಕಳ್ಳತನವಾಗಿತ್ತು. ಈ ಕುರಿತು ಮನೆ ಮಾಲೀಕರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊನೆಗೂ ಚಾಲಾಕಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 3 ಲಕ್ಷ 60 ಸಾವಿರ ಮೌಲ್ಯದ 120 ಗ್ರಾಂ ಆಭರಗಳನ್ನು ವಶ ಪಡಿಸಿಕೊಂಡಿದ್ದಾರೆ. ವಿಚಾರಣೆಯ ವೇಳೆ ಕಿಮ್ಸ್ ಆಸ್ಪತ್ರೆ ಎದುರು ಮನೆಯೊಂದರಲ್ಲೂ ಕಳ್ಳತನ ಮಾಡಿದ್ದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ. ಘಟನೆ ಕುರಿತು ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
