Breaking NewsLatestಆರೋಗ್ಯಲೈಫ್ ಸ್ಟೈಲ್

ಬೇಸಿಗೆಯಲ್ಲಿ ಪೈಲ್ಸ್ ನಿಂದ ದೂರವಿರಲು ಹೀಗೆ ಮಾಡಿ

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ದೇಹ ತುಂಬಾ ಉಷ್ಣತೆಯಿಂದ ಕೂಡಿರುತ್ತದೆ. ಹೀಗಾಗಿ ದೇಹವನ್ನು ನೈಸರ್ಗಿಕವಾಗಿ ತಂಪಾಗಿಸಲು ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದು ಬಹಳ ಮುಖ್ಯ. ದೇಹವನ್ನು ತಂಪಾಗಿಸುವ ಆಹಾರವನ್ನು ಸೇವನೆ ಮಾಡುವುದರಿಂದ ಪೈಲ್ಸ್ ಸಮಸ್ಯೆ ಉಲ್ಬಣಿಸದಂತೆ ತಡೆಯಬಹುದು. ಪೈಲ್ಸ್ ಸಮಸ್ಯೆ ಒಮ್ಮೊಮ್ಮೆ ಶತ್ರುಗಳಿಗೂ ಬೇಡ ಎಂದು ಸಾಕಷ್ಟು ಮಂದಿ ಅಂದುಕೊಳ್ಳುತ್ತಾರೆ. ಹೀಗಿರುವಾಗ ಇದರಿಂದ ದೂರ ಇರಲು ಇಲ್ಲಿದೆ ಕೆಲ ಟಿಪ್ಸ್ ಗಳು
ಮೂಲಂಗಿ ಜ್ಯೂಸ್
ಪೈಲ್ಸ್ಗೆ ಅತ್ಯುತ್ತಮವಾದ ಮನೆ ಮದ್ದುಗಳಲ್ಲಿ ಮೂಲಂಗಿ ಜ್ಯೂಸ್ ಕೂಡ ಒಂದಾಗಿದೆ. ಮೂಲಂಗಿ ರಸವು ಜೀರ್ಣಾಂಗ ವ್ಯವಸ್ಥೆಗೆ ಚಿಕಿತ್ಸೆ ನೀಡುತ್ತದೆ. ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಮೂಲಂಗಿ ಜ್ಯೂಸ್ ಸೇವನೆ ಮಾಡುವುದರಿಂದ ಪೈಲ್ಸ್ಗೆ ಗುಡ್ ಬೈ ಹೇಳಬಹುದು.
ಅಂಜೂರ
ಒಣ ಹಣ್ಣುಗಳಲ್ಲಿ ಅಂಜೂರ ಹಣ್ಣುಗಳು ತುಂಬಾ ರುಚಿಯಾಗಿರುತ್ತದೆ. ಅಂಜೂರ ಹಣ್ಣು ಪೈಲ್ಸ್ಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಸುಮಾರು 3 ರಿಂದ 4 ಅಂಜೂರವನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನಸಿ. ಬೆಳಗ್ಗೆ ಅವುಗಳನ್ನು ತಿನ್ನಿ. ಹೀಗೆ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಪೈಲ್ಸ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
ಹರಳೆಣ್ಣೆ
ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಅಲ್ಲದೆ, ಉರಿಯೂತದಂತಹ ಸಮಸ್ಯೆಯನ್ನು ಗುಣಪಡಿಸುವ ಪ್ರಬಲವಾದ ಶಕ್ತಿಯನ್ನು ಹೊಂದಿರುವುದರಿಂದ, ಪ್ರತಿನಿತ್ಯ ಹರಳೆಣ್ಣೆಯನ್ನು ಬಳಸುತ್ತಾ ಬನ್ನಿ. ಇದರಿಂದ ಪೈಲ್ಸ್ನಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button