Breaking NewsLatestರಾಜ್ಯಸುದ್ದಿ

ಕಾಸರಗೋಡಿನಲ್ಲಿ ಗ್ರಾಮಗಳ ಹೆಸರು ಬದಲಾವಣೆಯಿಲ್ಲ; ಸಿದ್ದರಾಮಯ್ಯ ಮನವಿಗೆ ಪಿಣರಾಯಿ ಮನ್ನಣೆ

ಚಿಕ್ಕಮಗಳೂರು: ಕರ್ನಾಟಕ-ಕೇರಳ ಗಡಿನಾಡು ಪ್ರದೇಶದ ಕಾಸರಗೋಡು ಜಿಲ್ಲೆಯ ಯಾವುದೇ ಗ್ರಾಮಗಳ ಹೆಸರನ್ನು ಬದಲಾಯಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟೀಕರಣ ನೀಡಿದ್ದಾರೆ.

ಬಹುಕಾಲದಿಂದ ಕನ್ನಡದಲ್ಲಿರುವ ಹೆಸರು ಬದಲಾವಣೆ ಮಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೇರಳ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ಎರಡೂ ರಾಜ್ಯಗಳ ನಡುವೆ ಬಾಂಧವ್ಯ, ಸೌಹಾರ್ಧತೆ ಗಟ್ಟಿಗೊಳಿಸಲು ತಮ್ಮಿಂದ ವ್ಯಕ್ತವಾದ ಅಭಿಪ್ರಾಯಕ್ಕೆ ಧಕ್ಕೆ ತರುವುದಿಲ್ಲ. ತಮ್ಮ ಮನವಿಯನ್ನು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button