Breaking NewsLatestರಾಷ್ಟ್ರೀಯವಿಜ್ಞಾನ / ತಂತ್ರಜ್ಞಾನ

ಸಮುದ್ರ ಮಟ್ಟದಲ್ಲಿ ವ್ಯಾಪಕ ಬದಲಾವಣೆ; ಮಂಗಳೂರು ಸೇರಿ 12 ನಗರಗಳಿಗೆ ಕಾದಿದೆ ಅಪಾಯ

ನವದೆಹಲಿ: ಭಾರತದ ಸಮುದ್ರ ತೀರದಲ್ಲಿರುವ ಹಲವು ನಗರಗಳು ಈ ಶತಮಾನದ ಅಂತ್ಯಕ್ಕೆ ಅಂದರೆ 2100 ಇಸವಿಯಲ್ಲಿ ಮುಳುಗಿ ಸಮುದ್ರ ಪಾಲಾಗಲಿವೆ ಎಂಬ ಆತಂಕಕಾರಿ ಎಚ್ಚರಿಕೆಯನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿದೆ.

ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿಯು ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ಅವಲೋಕನ ನಡೆಸಿದ್ದು ಐಪಿಸಿಸಿ ವರದಿಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.

ಕರ್ನಾಟಕದ ಮಂಗಳೂರು, ವಾಣಿಜ್ಯ ನಗರಿ ಮುಂಬೈ, ತಮಿಳುನಾಡಿನ ಚೆನೈ, ಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಕಾಂಡ್ಲಾ, ಒಖಾ, ಭಾವನಗರ ಸೇರಿದಂತೆ ಒಟ್ಟು 12 ನಗರಗಳು ನೀರುಪಾಲಾಗಲಿವೆ. ಪ್ರಪಂಚದೆಲ್ಲೆಡೆ ಸಮುದ್ರ ಮಟ್ಟದಲ್ಲಾಗುತ್ತಿರುವ ಬದಲಾವಣೆ ವರದಿ ನೀಡಲಾಗುತ್ತಿದೆ.

ಮಾಹಿತಿಯ ಪ್ರಕಾರ ಕಳೆದ 32 ವರ್ಷಗಳಿಂದ ಈಚೆಗೆ ಜಾಗತಿಕ ತಾಪಮಾನ ಪ್ರಮಾಣ ಹೆಚ್ಚಾಗಿದೆ. ಹಿಮಶಿಖರಗಳಲ್ಲಿ ಬೃಹತ್ ಹಿಮಪಾತಗಳು ಸಂಭವಿಸಿ ಸಮುದ್ರ ಸೇರುತ್ತಿವೆ.

ಗತಕಾಲದಲ್ಲಿ ಶತಮಾನಕ್ಕೊಮ್ಮೆ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತ ಬಂದಿರುವುದು ಸಂಶೋಧನೆಗಳಿಂದ ಗೊತ್ತಾಗಿದೆ. ಆದರೆ ಈಗ ಕೇವಲ 10 ವರ್ಷಗಳಿಗೊಮ್ಮೆ ಗಣನೀಯವಾಗಿ ಕಡಲಮಟ್ಟ ಏರಿಕೆಯಾಗುತ್ತಿದೆ. ಇಳಿಜಾರು ಪ್ರದೇಶಗದತ್ತ ನೀರು ಆವರಿಸುತ್ತಿದ್ದು, ಸಮುದ್ರ ತೀರದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಇದರಿಂದ ಮಲೆನಾಡು, ಬಯಲು ಸೀಮೆಗಳ ಹವಾಗುಣದ ಮೇಲೂ ಪರಿಣಾಮ ಹವಾಮಾನ ಏರುಪೇರಾಗಲಿದೆ ಎಂದು ನಾಸಾ ತಿಳಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button