Breaking NewsLatestಕ್ರೈಂಚಿಕ್ಕಮಗಳೂರುಜಿಲ್ಲಾ ಸುದ್ದಿರಾಜ್ಯಸುದ್ದಿ

ಬಿಯರ್ ಬಾಟಲಿಯೊಳಗೆ ನಾಗರಹಾವು: ಪ್ರಾಣ ಉಳಿಸಿಕೊಳ್ಳಲು ಪರದಾಟ!

ಚಿಕ್ಕಮಗಳೂರು: ನೀರು ಕುಡಿಯಲು ನಾಗರಹಾವು ಬಿಯರ್ ಬಾಟಲಿಯೊಳಗೆ, ತನ್ನ ತಲೆಯನ್ನು ಸಿಕ್ಕಿಸಿ ಕೊಂಡು, ಕೊನೆಗೆ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಟ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೌದು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ, ಬಿದ್ದಿದ್ದ ಬಿಯರ್ ಬಾಟಲಿ ಒಳಗೆ ನೀರು ಇರಬಹುದು ಎಂದು ತಿಳಿದು ಅದನ್ನು ಕುಡಿಯಲು ಹೋಗಿ ನಾಗರಹಾವು ತನ್ನ ತಲೆಯನ್ನು ಸಿಕ್ಕಿಸಿಕೊಂಡು ಜೀವ ಉಳಿಸಿಕೊಳ್ಳಲು ಪರದಾಟ ನಡೆಸಿದೆ. ಮಲೆನಾಡು ಭಾಗದಲ್ಲಿ ಬಿರು ಬೇಸಿಗೆ ವಾತಾವರಣವಿದ್ದು ನೀರಿಗಾಗಿ ಒಂದು ಕಡೆ ಆಹಾಕಾರ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಪ್ರಾಣಿಗಳಿಗೂ ಇದರ ಬಿಸಿ ತಟ್ಟಿದೆ.

ನೀರು ಕುಡಿಯಲೆಂದು ನಾಗರಹಾವು ಬಿಯರ್ ಬಾಟಲಿ ಒಳಗೆ ಸಿಲುಕಿ ತನ್ನ ತಲೆಯನ್ನು ಸಿಕ್ಕಿಸಿಕೊಂಡಿದ್ದನ್ನು ನೋಡಿದಂತಹ ಕೆಲ ಸಾರ್ವಜನಿಕರು ಕೂಡಲೇ ಮೂಡಿಗೆರೆಯ ಉರಗ ತಜ್ಞ ಅರಿಫ್ ಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಅರಿಫ್ ಬಿಯರ್ ಬಾಟಲಿ ಒಳಗೆ ತಲೆಯನ್ನು ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ಐದು ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿದು ಬಿಯರ್ ಬಾಟಲಿಯಿಂದ ಹರ ಸಾಹಸ ಮಾಡಿ ಅದರ ತಲೆಯನ್ನು ಹೊರ ತಂದಿದ್ದಾರೆ. ಈ ಸಮಯದಲ್ಲಿ ನಾಗರಹಾವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಉರಗ ತಜ್ಞ ಅರಿಫ್ ಹಾವಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡುವುದರ ಮೂಲಕ, ನಂತರ ಸುರಕ್ಷಿತವಾಗಿ ಚಾರ್ಮುಡಿ ಘಾಟ್ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button