Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್
ಕಾಶ್ಮೀರದ ಕೊರೆಯವ ಚಳಿಯಲ್ಲಿ ಮಾರ್ಟಿನ್ ಚಿತ್ರತಂಡ

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಸದ್ಯ ಅವರು ಕಾಶ್ಮೀರ ಕೊರೆಯವ ಚಳಿಯಲ್ಲಿ ಶೂಟಿಂಗ್ ಭಾಗಿಯಾಗಿದ್ದಾರೆ. ಪೊಗರು ಸಿನಿಮಾದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರತಂಡದಿಂದ ಮಾಹಿತಿಯೊಂದು ಬಹಿರಂಗವಾಗಿದೆ. ಇದೀಗ ಚಿತ್ರವು ಬಹುತೇಕ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆಯಂತೆ. ಧ್ರುವ ಸರ್ಜಾ ಜೊಡಿಯಾಗಿ ನಾಯಕಿ ವೈಭವಿ ಬಣ್ಣ ಹಚ್ಚಿದ್ದಾರೆ. ಕೆಲವು ವಿಡಿಯೋ ಹಾಗೂ ಫೋಟೋಗಳು ಇನ್‌ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ.
