Breaking Newsಮೈಸೂರು
ಆಷಾಢ ಶುಕ್ರವಾರ: ಚಾಮುಂಡೇಶ್ವರಿಗೆ ಸರಳ ಪೂಜೆ

ಮೈಸೂರು: ಕೊರೊನಾ ಭೀತಿ ಹಿನ್ನೆಲೆ ಆಷಾಢ ಶುಕ್ರವಾರವಾದ ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಸಾಂಪ್ರದಾಯಿಕ ಹಾಗೂ ಸರಳವಾಗಿ ಪೂಜೆ ಸಲ್ಲಿಸಲಾಯಿತು.

ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ರುದ್ರಾಭಿಷೇಕ, ಕುಂಕುಮಾಭಿಷೇಕ ಮಾಡಿ ವಿಶೇಷ ಅಲಂಕಾರದೊಂದಿಗೆ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ಕೊರೊನಾ ಕಾರಣ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಗಿಜಿಗಿಡುತ್ತಿದ್ದ ಚಾಮುಂಡಿಬೆಟ್ಟ ಬಣಗುತ್ತಿದೆ. ಬೆಟ್ಟದ ಮೇಲೆ ಹೋಗಲು ಅವಕಾಶ ಇಲ್ಲದ ಹಿನ್ನೆಲೆ ಬೆಟ್ಟದ ಪಾದದಲ್ಲಿ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
