ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬಾಗಲಕೋಟೆ : ರಾಜ್ಯ ಹಾಗೂ ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದೇವೆ, ಆದರೆ ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿಯು ಇಲ್ಲಾ , ಕೇಂದ್ರದಲ್ಲಿಯು ಇಲ್ಲಾ, ಹೀಗಿದ್ದಾಗ್ಯೂ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸೀಟಗಾಗಿ ಕಿತ್ತಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಹೇಳುವುದಾದರೆ ಅಧಿಕಾರ ಇದ್ದಾಗಲೂ ಕಿತ್ತಾಟ ಮಾಡಬಾರದು, ಕಾಂಗ್ರೆಸ್ ಪಕ್ಷದ ಕಿತ್ತಾಟಕ್ಕೂ ನಮ್ಮಗೂ ಯಾವುದೇ ಸಂಬಂಧವಿಲ್ಲ, ಸಿದ್ದಾರಾಮಯ್ಯನವರ ಬೆಂಬಲಿಗರು ಹಾಗೂ ಡಿಕೆಶಿ ಬೆಂಬಲಿಗರು ನಮ್ಮ ನಾಯಕ ಮುಂದಿನ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ, ಅಲ್ಲದೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಗುವುದಿಲ್ಲಾ ಅನ್ನುವುದು ಓಪನ್ ಸೀಕ್ರೇಟ್ ಇದೆ. ಇದೂ ಇಡೀ ದೇಶಕ್ಕೆ ಗೊತ್ತಿರುವ ವಿಚಾರವಾಗಿದೆ. ಕಾಂಗ್ರೆಸ್ ನಾಉರಲ್ಲಿ ಯಾರಿಗೊ ಒಬ್ಬರಿಗೆ ಮುಂದಿನ ಬಾರಿ ನಾವು ಅಧಿಕಾರಕ್ಕೆ ಬರುತ್ತೆವೆ ಎಂಬ ಕನಸು ಬಿದ್ದಿರಬಹುದು. ಅದೇ ನಂಬಿಕೊಂಡು ಈಗ ಕಾಂಗ್ರೆಸ್‌ನವರು ಮಾತನಾಡುತ್ತಿದ್ದಾರೆ. ಇನ್ನೂ ರಾಜ್ಯ-ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅನ್ನುವುದು ಗೋತ್ತಿರುವ ವಿಚಾರ, ರಾಜ್ಯದಲ್ಲಿ ನಮ್ಮಗೆ ಇನ್ನೂ ಎರಡು ವರ್ಷ ಅವಧಿ ಇದೆ. ಹಾಗಾಗಿ ಅದರ ಕುರಿತು ನಾವೇನೂ ಕಾಮೆಂಟ್ ಮಾಡುವುದಿಲ್ಲ ಎಂದು ಹೇಳಿದರು.
ಸಚಿವ ಸಿ ಪಿ ಯೋಗೇಶ್ವರ್ ಅವರು ಪರೀಕ್ಷೆ ಯಾವ ವಿವಿಯಲ್ಲಿ ಬರೆದಿದ್ದಾರೆ ಎಂಬುವುದು ನಮಗಂತು ಗೊತ್ತಿಲ್ಲಾ. ಇನ್ನೂ ಪರೀಕ್ಷೆ ಬರದಿದ್ದರೆ ಅದಕ್ಕೆ ಪರೀಕ್ಷೆ ತೆಗೆದುಕೊಂಡವರು ಉತ್ತರ ನೀಡುತ್ತಾರೆ. ಸಿ ಪಿ ಯೋಗೇಶ್ವರ್ ಅವರು ಯಾವ ಅರ್ಥದಲ್ಲಿ ಪರೀಕ್ಷೆ ಬರಿದ್ದೇವೆ ಎಂದು ಹೇಳಿದ್ದಾರೊ ಗೊತ್ತಿಲ್ಲಾ, ಈಗಾಗಲೇ ನಮ್ಮ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ರವರು ಸ್ಪಷ್ಟವಾಗಿ ಹೇಳಿದ್ದಾರೆ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ ಎಂದರು.
ಕೇಂದ್ರ ಸಚಿವ ಸಂಪುಟ ವಿಸ್ತರಣೆ
ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ರಾಜ್ಯದಿಂದ ಯಾರನ್ನೆ ತೆಗೆದುಕೊಳ್ಳಬೇಕು ಎಂದು ನಮ್ಮನ್ನು ಕೇಳಿಲ್ಲಾ, ಅಲ್ಲದೆ ಸಚಿವ ಸಂಪುಟ ವಿಸ್ತರಣೆಯನ್ನು ನಮ್ಮ ಪ್ರಧಾನಿಗಳು ಮಾಡುತ್ತಾರೆ. ನಮ್ಮ ಪ್ರಧಾನಿಗಳಿಗೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯದ ಬಗ್ಗೆ ಹಾಗೂ ರಾಜ್ಯದಿಂದ ಯಾರನ್ನು ಸೇರಿಸಿಕೊಳ್ಳಬೇಕು ಎಂಬುವುದು ಗೊತ್ತಿದೆ. ಹಾಗಾಗಿ ಇದರಲ್ಲಿ ನನ್ನ ಸಲಹೆ ಅಗತ್ಯತೆ ಬೇಕಾಗಿಲ್ಲ, ಒಂದು ವೇಳೆ ನಮ್ಮ ನಾಯಕರು ಕೇಳುದರೆ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ, ಒಂದು ವೇಳೆ ರಾಜ್ಯ ಘಟಕ ಇಂತವರನ್ನು ಕೇಂದ್ರ ಕ್ಯಾಬಿನೆಟ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯ ಮಾಡಿದರೆ ಅದಕ್ಕೆ ನಾನು ಕೂಡಾ ಧ್ವನಿಗೂಡಿಸುತ್ತೆನೆ, ಅಲ್ಲದೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಕುರಿತು ಎಲ್ಲು ಕೂಡಾ ಪ್ರಧಾನಿಗಳು ಹೇಳಿಲ್ಲ, ಮಾಧ್ಯಮಗಳಲ್ಲಿ ಬರುತ್ತಿವೆ, ಒಂದು ವೇಳೆ ಸಂಪುಟ ವಿಸ್ತರಣೆ ಆಗಿದೆ ಆದಲ್ಲಿ ಎಲ್ಲವನ್ನು ನಮ್ಮ ಪ್ರಧಾನಿಗಳು ಗಮನಕ್ಕೆ ತೆಗೆದುಕೊಂಡು ಮಾಡುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ತಿಳಿಸಿದರು.
