Breaking NewsLatestಜಿಲ್ಲಾ ಸುದ್ದಿದಾವಣಗೆರೆರಾಜಕೀಯರಾಜ್ಯಸುದ್ದಿ

ಹೋಮ ಮಾಡಲು ಹೋಗಿ ಮತ್ತೆ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ರೇಣುಕಾಚಾರ್ಯ !

ದಾವಣಗೆರೆ: ಮೊನ್ನೆ ಮೊನ್ನೆಯಷ್ಟೇ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ತೀವ್ರ ಮುಜುಗರ ಅನುಭವಿಸಿದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ಮತ್ತೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಕುಟುಂಬದಿದಂದ ಕೋವಿಡ್ ನಿಯಮ ಉಲ್ಲಂಘಿಸಿ ಹೋಮ ನಡಸಲಾಗಿದೆ. ರೇಣುಕಾಚಾರ್ಯ ಮತ್ತು ಪತ್ನಿ ಸುಮಾರಿಂದ ಕೋವಿಡ್ ನಿಯಮ ಉಲ್ಲಂಘನೆ ಆಗಿದ್ದು, ಜಿಲ್ಲಾಡಳಿತದ ಕೊರೊನಾ ನಿಯಮಾವಳಿ ಬ್ರೇಕ್ ಮಾಡಿ ಗಣ ಹೋಮ ಮಾಡಿದ್ದಾರೆ‌.

ಹೋಮ‌ದ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಕೋವಿಡ್ ನಿಯಮ ಮರೆತು ಧಾರ್ಮಿಕ ಕಾರ್ಯ ನೆರವೇರಿಸಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.‌ ಕುಂದೂರು ಗಣೇಶ ದೇವಸ್ಥಾನದಲ್ಲಿ ಗಣಹೋಮ ಮಾಡಿ ದಂಪತಿ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಗಣಪತಿ ಸಂಕಷ್ಟಿ ಸಮಿತಿಯಿಂದ ಹಮ್ಮಿಕೊಳ್ಳಲಾದ ಪೂಜೆಯಲ್ಲಿ ಶಾಸಕ ರೇಣುಕಾಚಾರ್ಯ ಭಾಗಿಯಾಗಿದ್ದು, ಗಣಹೋಮ ಮಾಡಿ ಮತ್ತೆ ಕೊರೋನಾ ರೂಲ್ಸ್ ಅನ್ನು ಗಾಳಿಗೆ ತೂರಿದ್ದಾರೆ. ಪತಿ-ಪತ್ನಿ ಜೊತೆ ನೂರಾರು ಜನ ಸೇರಿ ಧಾರ್ಮಿಕ ಆಚರಣೆ ಮಾಡಿದ್ದಾರೆ. ಪದೆ ಪದೇ ಕೋವಿಡ್ ನಿಯಮ ಉಲ್ಲಂಘಿಸುತ್ತಿರೋ ಆಡಳಿತರೂಢ ಪಕ್ಷದ ಶಾಸಕ ರೇಣುಕಾಚಾರ್ಯ ಅವರು, ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ತೀವ್ರ ಟೀಕೆಗೆ ಗುರಿಯಾಗಿದ್ದರು. ಬಳಿಕ ಕ್ಷಮೆಯನ್ನೂ ಯಾಚಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button