Breaking NewsLatestವಿದೇಶಸುದ್ದಿ

Ukrainian Plane Hijacked: ಕಾಬೂಲ್ ನಿಂದ ಉಕ್ರೇನ್ ವಿಮಾನ ಅಪಹರಣ ಮಾಡಿದ ತಾಲಿಬಾನ್​​ ಉಗ್ರರು

ಇರಾನ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇರಾನ್ ನಲ್ಲಿ ಉಕ್ರೇನ್ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಮಂಗಳವಾರ ರಷ್ಯಾದ ಟಿಎಎಸ್ಎಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಾಬೂಲ್​​ನಿಂದ ಪ್ರಯಾಣಿಕರೊಂದಿಗೆ ಹಾರುತ್ತಿದ್ದ ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಕರೆದೊಯ್ಯಲಾಗಿದೆ ಎಂದು ಪತ್ರಕರ್ತ ವಜಾಹತ್ ಕಾಜ್ಮಿ ಟ್ವೀಟ್ ಮಾಡಿದ್ದಾರೆ.

ಕಳೆದ ಭಾನುವಾರ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದ್ದು, ಸದ್ಯ ಕಾಬೂಲ್ ಏರ್ ಪೋರ್ಟ್ ನಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ. ಇನ್ನೂ ಅಪ್ಘಾನಿಸ್ತಾನದಿಂದ ಭಾರತಕ್ಕೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಕಾಬೂಲ್ ಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆಗಿದೆ.

ನಾವು 20 ವರ್ಷ ಅಫ್ಘಾನಿಸ್ತಾನದ ಜೊತೆ ಕೆಲಸ ಮಾಡಿದ್ದೇವೆ. ಸದ್ಯ ಕಾಬೂಲ್ ನಲ್ಲಿ ಅಮೆರಿಕದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ಅಮೆರಿಕ ಸೇನೆಯ ಮೇಲೆ ತಾಲಿಬಾನಿಗಳು ದಾಳಿ ನಡೆಸಿದ್ರೆ ಪ್ರತ್ಯುತ್ತರ ನೀಡುತ್ತೇವೆ. ಅಫ್ಘಾನಿಸ್ತಾನದ ಕುರಿತು ಮುಂದಿನ ವಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗವುದು ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button