ರಾಯಣ್ಣನ ಪ್ರತಿಮೆ ಒಡೆದು ಹಾಕಿದ್ದು ಸರಿಯಲ್ಲ; ಎಂಇಎಸ್ ಬ್ಯಾನ್ ಮಾಡಲೇಬೇಕು: ನಟ ಪ್ರೇಮ್

ಬಾಗಲಕೋಟೆ : ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಮಾಡಲೇಬೇಕು.ಎಂಇಎಸ್ ನಿಂದ ಕನ್ನಡಿಗರಿಗಷ್ಟೇ ಅಲ್ಲ ಅಲ್ಲಿಯ ಮರಾಠಿಗರಿಗೂ ತೊಂದರೆ ಆಗ್ತಿದೆ ಎಂದು ಬಾಗಲಕೋಟೆಯಲ್ಲಿ ಪ್ರೇಮಂ ಪೂಜ್ಯಂ ಚಿತ್ರದ ನಟ ಪ್ರೇಮ್ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಾರ್ವಜನಿಕ ಆಸ್ತಿಪಾಸ್ತಿ ಮೇಲೆ ದಾಳಿ,ಕನ್ನಡಿಗರ ಮೇಲೆ ಹಲ್ಲೆ ಸರಿಯಾದುದ್ದಲ್ಲ.ಎಂಇಎಸ್ ನ ಪುಂಡಾಟಿಕೆ ಯಾರು ಸಹಿಸಲ್ಲ.ಕನ್ನಡಿಗರು ಏನು ಮಾಡಿದ್ರೂ ಸುಮ್ನೇ ಇರುತ್ತಾರೆ ಇ ತಿಳಿಯಬೇಡಿ.ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಹೋರಾಟದ ಹಾದಿ ನಾವು ಹಿಡಿದಿಲ್ಲ.ರಾಯಣ್ಣನ ಪ್ರತಿಮೆ ಒಡೆದು ಹಾಕಿದ್ದು ಸರಿಯಲ್ಲ.ನಾವು ಮನಸ್ಸು ಮಾಡಿದ್ರೆ ನೂರು ಶಿವಾಜಿ ಮಹಾರಾಜರ ಪ್ರತಿಮೆ ಒಡೆಯಬಹುದು.ಎಂಇಎಸ್ ಮಾಡಿದ ಕಚಡಾ ಕೆಲಸ ಕನ್ನಡಿಗರು ಮಾಡಲ್ಲ.ಶಿವಾಜಿ ಮಹಾರಾಜರನ್ನ ಪೂಜ್ಯ ಸ್ಥಾನದಲ್ಲಿಟ್ಟು ನಾವು ಗೌರವಿಸುತ್ತೇವೆ,ರಾಯಣ್ಣನನ್ನು ನೀವು ಗೌರವಿಸಬೇಕು.ಇವರಿಬ್ಬರು ಸ್ವಾತಂತ್ರ್ಯ ಹೋರಾಟ ಮಾಡಿದವರು.ನಾವೆಲ್ಲ ಒಂದೇ,ನಮ್ಮ ನಮ್ಮಲ್ಲಿ ಇಂತಹ ಕಲಹ ಸರಿಯಲ್ಲ.ಎರಡು ರಾಜ್ಯ ಸರ್ಕಾರಗಳು ಎಂಇಎಸ್ ಸಂಘಟನೆಗೆ ಬೈದು ಬುದ್ದಿ ಹೇಳಬೇಕು.ಎಂಇಎಸ್ ಸಂಘಟನೆ ಸರ್ಕಾರಗಳೇ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಈ ವಿಚಾರದಲ್ಲಿ ಮುಖ್ಯವಾಗಿ ಪ್ರತಿ ಸ್ಪಂದಿಸಬೇಕಾಗಿರೋದು ಎರಡು ಸರ್ಕಾರಗಳು.ಎರಡು ಸರ್ಕಾರಗಳ ಮುಖ್ಯಮಂತ್ರಿಗಳು ಸೇರಿಕೊಂಡು ಎಂ.ಇ.ಎಸ್ ಗೆ ಬೈದು ಬುದ್ದಿ ಹೇಳಬೇಕು.ಎರಡು ಕಪಾಳಕ್ಕೆ ಹೊಡೆದು ಬುದ್ದಿಹೇಳಬೇಕು.ನಾವು ಚಿತ್ರನಟರು ಏನ್ ಮಾಡುತ್ತೇವೆ ಟ್ವೀಟ್ ಮಾಡ್ತೀವಿ ಅಥವಾ ಉಗ್ರ ಹೋರಾಟ ಮಾಡ್ತೀವಿ.ಇದರಿಂದ ಪರಿಸ್ಥಿತಿ ಬಗೆಹರೆಯುತ್ತಾ..?ಯಾವತ್ತು ಎಂ.ಇ.ಎಸ್ ಸಂಘಟನೆಯನ್ನು ಬ್ಯಾನ್ ಮಾಡ್ತೀವಿ ಅವತ್ತು ಶಾಂತಿ ಸಿಗುತ್ತೆ ಎಂದರು.
ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಆಗ್ತಿದೆ ಮಹಾರಾಷ್ಟ್ರ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಮೀಡಿಯಾದವ್ರ ಕಣ್ತಪ್ಪಿಸಿ, ಯಾರೂ ಏನು ಮಾಡೋಕಾಗಲ್ಲ, ಎಲ್ಲೆ ಒಂದು ಕಲ್ಲು ಬಿದ್ರೂ ಗೊತ್ತಾಗೇ ಆಗುತ್ತೆ.ನೀವೇ ಹೇಳಿ, ಒಬ್ಬ ಕನ್ನಡಿಗ, ಒಬ್ಬ ಮರಾಠಿಗನ ಮೇಲೆ ದೌರ್ಜನ್ಯ ಮಾಡಿದ್ದಾರಾ?ಮರಾಠಿಗರ ಧ್ವಜ ಕನ್ನಡಿಗರು, ಸುಟ್ಟಿರೋದು ಯಾವಾಗಲಾದ್ರೂ ನೋಡಿದ್ದೀರಾ, ಇಲ್ವಲ್ಲ.ನೀವು ಸಾರ್ವಜನಿಕವಾಗಿ ಕನ್ನಡ ಬಾವುಟ ಸುಡ್ತೀರಾ ಅಂದ್ರೆ, ನಮಗೂ ಕಿಚ್ಚು ಹತ್ತುತ್ತೆ, ಕೋಪ ಬರುತ್ತೆ ಎಂದು ಪ್ರೇಮ್ ಎಂ.ಇ.ಎಸ್ ಗೆ ಎಚ್ಚರಿಕೆ ನೀಡಿದರು.ಆದ್ರೆ ಆ ಕೋಪವನ್ನು ಬೇರೆ ರೀತಿ ವ್ಯಕ್ತಪಡಿಸಲು ಹೋದ್ರೆ, ಸಾರ್ವಜನಿಕರಿಗೆ ತೊಂದರೆ ಆಗುತ್ತೆ.ಅದು ಆಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
