ಎಲ್ಲೆಲ್ಲೂ ಜೇಮ್ಸ್ ಹವಾ: ಒಂದೇ ದಿನಕ್ಕೆ ಚಿತ್ರದ ಕಲೆಕ್ಷನ್ ಎಷ್ಟು ಆಗಿದೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮ . ದೈಹಿಕವಾಗಿ ಅಪ್ಪು ಅಭಿಮಾನಿಗಳನ್ನ ಅಗಲಿದ್ದರೂ, ಅವರು ನಮ್ಮ ಜೊತೆಯಲ್ಲೇ ಇದ್ದಾರೆ ಎಂದುಕೊಂಡು ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಕೆಲವರು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳು ವಿಭನ್ನವಾಗಿ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ.
ಇಂದು ವಿಶೇಷವೆಂದರೆ ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಎಲ್ಲೆಡೆ ಅದ್ಬುತ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ ಸೇರಿ ದೇಶ-ವಿದೇಶಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಶೋಗಳು ನಡೆಯುತ್ತಿದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಸಖತ್ ಭಾವುಕರಾಗಿದ್ದರು.
ಅಂದಹಾಗೆ ರಾಜ್ಯದಲ್ಲಿ ಒಟ್ಟು 376 ಸಿಂಗಲ್ ಸ್ಕ್ರೀನ್ , 180 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಜೇಮ್ಸ್ ಶೋ ನಡೆಯುತ್ತಿದೆ. ಒಂದೇ ದಿನಕ್ಕೆ ಈ ಸಿನಿಮಾ ಭಾರಿ ಮೊತ್ತದಲ್ಲಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ. ಸುಮಾರು 25-30 ಕೋಟಿ ರೂಪಾಯಿ ಬಾಚಿದೆ ಎಂದು ಹೇಳಲಾಗುತ್ತಿದೆ. ಇನ್ನು ಒಂದು ವಾರದಲ್ಲಿ 100 ಕೋಟಿ ರೂಪಾಯಿ ಬಾಚುವ ಸಾಧ್ಯತೆ ಇದೆ.
