Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ಹುಬ್ಬಳ್ಳಿಯಲ್ಲಿ ಇಬ್ಬರು ಪಾಲಿಕೆ ಆರೋಗ್ಯ ನಿರೀಕ್ಷರು ಎಸಿಬಿ ಬಲೆಗೆ

ಧಾರವಾಡ : ಬಿಲ್ ಕ್ಲಿಯರ್ ಮಾಡಲು ಗುತ್ತಿಗೆದಾರನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇಬ್ಬರು ಆರೊಗ್ಯ ನಿರೀಕ್ಷಕರು ಹುಬ್ಬಳ್ಳಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಇಬ್ಬರು ಆರೊಗ್ಯ ನಿರೀಕ್ಷಕರು ಗುತ್ತಿಗೆದಾರನಿಗೆ ಬಿಲ್ ಕ್ಲಿಯರ್ ಮಾಡಲು, ಗುತ್ತಿಗೆದಾರನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನೂರಂದಪ್ಪ ಭಜಂತ್ರಿ, ತಜ್ಮೈಲ್ ಶಿರಸಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು. ಗುತ್ತಿಗೆದಾರನಿಂದ 22 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಪ್ರತಿ ತಿಂಗಳು ಮಾಮೂಲಿ ಪಡೆಯುತ್ತಿದ್ದ ಅಧಿಕಾರಿಗಳಿಂದ ರೋಷಿ ಹೋದ ಗುತ್ತಿಗೆದಾರ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಿದ್ದ.
ದೂರು ನೀಡದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರೂ ಭ್ರಷ್ಟ ಅಧಿಕಾರಿಗಳನ್ನು ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ
