Breaking Newsಬೆಳಗಾವಿ

ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ

ಬೆಳಗಾವಿ: ಇಂದು ವಿಶ್ವ ಅಪ್ಪಂದಿರ ದಿನ, ಈ ದಿನವೇ ಜವಾಬ್ದಾರಿ ಹೊತ್ತುಕೊಂಡಿದ್ದ ಅಪ್ಪ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೆಂಡತಿಯ ಸಾವಿನಿಂದ ಮನನೊಂದಿದ್ದ ಕಾಡಪ್ಪ ತನ್ನ ಇಬ್ಬರು ಹೆಣ್ಣುಮಕ್ಕಳಾದ ಕೀರ್ತಿ ಹಾಗೂ ಸ್ಫೂರ್ತಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕಾಡಪ್ಪ (47) ಹಾಗೂ ಮಕ್ಕಳಾದ ಕೀರ್ತಿ (20, ಸ್ಫೂರ್ತಿ (18) ಎಂದು ತಿಳಿದು ಬಂದಿದೆ.

ವಾರದ ಹಿಂದೆ ಕಾಡಪ್ಪನ ಹೆಂಡತಿ ಚೆನ್ನವ್ವ ರಂಗಾಪುರೆ ಸಾವನ್ನಪ್ಪಿದ್ದರು. ಚೆನ್ನವ್ವಳ ಅಗಲಿಕೆಯ ನಂತರ ತೀವ್ರವಾಗಿ ಕುಟುಂಬ ಮನನೊಂದಿತ್ತು ಎಂದು ಹೇಳಲಾಗುತ್ತಿದೆ. ಮೂರು ಜನ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button