Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ನಿಂದ 20 ಲಕ್ಷ ಮಂದಿ ವಲಸೆ: ಅವರಲ್ಲಿ 8 ಲಕ್ಷ ಮಂದಿ ಮಕ್ಕಳು!

ಉಕ್ರೇನ್:  ರಷ್ಯಾ ದಾಳಿಯಿಂದಾಗಿ ಪ್ರಾಣಭಯದಲ್ಲಿರುವ ಉಕ್ರೇನಿಗರು ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಇದುವರೆಗೆ 20 ಲಕ್ಷಕ್ಕೂ ಅಧಿಕಾ ಉಕ್ರೇನಿಗರು ಉಕ್ರೇನ್‌ ಬಿಟ್ಟು ಪಕ್ಕದ ದೇಶಗಳಿಗೆ ವಲಸೆ ಹೋಗಿದ್ದಾರೆ. ಇದ್ರಲ್ಲಿ 8 ಲಕ್ಷ ಮಂದಿ ಮಕ್ಕಳೇ ಇದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಉಕ್ರೇನ್‌ನ ಸೇವ್‌ ದಿ ಚಿಲ್ಡ್ರನ್‌ ಎಂಬ ಸಂಸ್ಥೆ ಈ ಮಾಹಿತಿ ನೀಡಿದೆ.

ತುಂಬಾ ಮಕ್ಕಳು ಯಾವ ಸಹಾಯವೂ ಇಲ್ಲದೇ ಒಬ್ಬಂಟಿಯಾಗೇ ಉಕ್ರೇನ್‌ ಬಿಟ್ಟು ಹೋಗುತ್ತಿದ್ದಾರೆ. ಮನೆಯಲ್ಲಿರುವ ಹಿರಿ ವಯಸ್ಸಿನವರೇ ಮಕ್ಕಳನ್ನು ಹೊರಗೆ ಕಳುಹಿಸುತ್ತಿದ್ದಾರಂತೆ. ಬೇರೆ ದೇಶಕ್ಕೆ ಹೋಗಿ ಪ್ರಾಣ ಕಾಪಾಡಿಕೊಳ್ಳಿ ಎಂದು ಮಕ್ಕಳನ್ನು ಮನೆ ಬಿಟ್ಟು ಕಳುಹಿಸುತ್ತಿದ್ದಾರೆ.

ಮಕ್ಕಳನ್ನು ಬದುಕಿಸಿಕೊಳ್ಳುವುದಕ್ಕೆ ತುಂಬಾ ಜನ ತಂದೆ-ತಾಯಿಗಳು ಕೆಲವು ಹೃದವಿದ್ರಾವಕ ಹಾಗೂ ನಿಸ್ಸಹಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಮನೆಗಳನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಯುಕ್ರೇನ್‌ನಲ್ಲಿಯೇ ಇದ್ದುಬಿಡುತ್ತಿದ್ದಾರೆ. ಆದ್ರೆ ಮಕ್ಕಳನ್ನು ಮಾತ್ರ ಪಕ್ಕದ ದೇಶಗಳಿಗೆ ಕಳುಹಿಸುತ್ತಿದ್ದಾರೆ. ಹೀಗಂತ ಸೇವ್‌ ದಿ ಚಿಲ್ಡ್ರನ್‌ ಸಂಸ್ಥೆ ಹೇಳಿಕೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button