Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ
ಕೃಷ್ಣಾ ನದಿಗೆ 35 ಸಾವಿರ ಕ್ಯುಸೆಕ್ ನೀರು

ನಾರಾಯಣಪುರ: ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾದ ಹಿನ್ನೆಲೆ ಬಸವಸಾಗರಕ್ಕೆ ಒಳಹರಿವು ಹೆಚ್ಚುತ್ತಿದೆ. ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.
ಬಸವಸಾಗರಕ್ಕೆ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದಿಂದ ಹಾಗೂ ಮಲಪ್ರಭಾ ನದಿಯಿಂದ ಸೋಮವಾರ ಬೆಳಿಗ್ಗೆ 40 ಸಾವಿರ ಕ್ಯುಸೆಕ್ ಒಳಹರಿವು ಇತ್ತು.
ಜಲಾಶಯದ 5 ಕ್ರಸ್ಟ್ ಗೇಟ್ಗಳ ಮೂಲಕ 29 ಸಾವಿರ ಕ್ಯುಸೆಕ್ ಹಾಗೂ ಮುರುಡೇಶ್ವರ ಜಲ
ವಿದ್ಯುತ್ ಸ್ಥಾವರ ಮೂಲಕ 6 ಸಾವಿರ ಕ್ಯುಸೆಕ್ ಸೇರಿ ಒಟ್ಟು 35 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಎಂಜನಿಯರ್ ಪ್ರಕಾಶ ಎಂ. ಪ್ರಜಾವಾಣಿಗೆ ಮಾಹಿತಿ ನೀಡಿದರು.
